ಪಿಳ್ಳಂಗಿರಿ ಪ್ರಸಿದ್ಧ ದೇವಸ್ಥಾನದಲ್ಲಿ ಕಳ್ಳತನ, ದೇವರ ಆಭರಣಗಳ ಕಳವು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನದಲ್ಲಿ‌ ಕಳ್ಳತನ ಮಾಡಲಾಗಿದೆ.
ತಾಲೂಕಿನ ಪಿಳ್ಳಂಗಿರಿಯಲ್ಲಿರುವ ಶ್ರೀ ವೆಂಕಟರಮಣ  ದೇವಸ್ಥಾನದಲ್ಲಿ ಕಳ್ಳತನ‌ಮಾಡಲಾಗಿದ್ದು, ಗ್ರಾಮಾಂತರ ಪೊಲೀಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

READ | ಶಿವಮೊಗ್ಗದಲ್ಲಿ ತಗ್ಗಿದ ಕೊರೊನಾ ಆರ್ಭಟ, ಸಾವಿನ ಸಂಖ್ಯೆಯಲ್ಲೂ ಇಳಿಕೆ

ದೇವಸ್ಥಾನದಲ್ಲಿ ಏನೇನು ಕಳವು | ದೇವಸ್ಥಾನದ ಬೀಗ ಮುರಿದು ತಲಾ 500 ಗ್ರಾಂ ತೂಕದ ಕಿರೀಟ, ಶಂಖ ಹಸ್ತ, ಚಕ್ರಹಸ್ತ, 750 ಗ್ರಾಂ ತೂಕದ ದೇವರ ಮೇಲೆ ಹಾಕಿರುವ ಎದೆ ಕವಚ, ಎದೆ ಭಾಗದ ಲಕ್ಷ್ಮೀ ಪದಕ, ಸೂರ್ಯ ಕಟಾರ, ವರದ ಹಸ್ತ, ಸೊಂಟದ ಡಾಬು, ಎರಡು ದೇವರ ಪಾದಗಳನ್ನು ಕಳವು‌ ಮಾಡಲಾಗಿದೆ. ಅಂದಾಜು 81 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

error: Content is protected !!