ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ಎರಡೂವರೆ ತಿಂಗಳಿಂದ ಜನರನ್ನು ಭಾರಿ ಭೀತಿಗೀಡು ಮಾಡಿರುವ ಕೊರೊನಾ ಸೋಂಕು ಜಿಲ್ಲೆಯಲ್ಲಿ ಇಳಿಮುಖವಾಗುತ್ತಿದೆ.
https://www.suddikanaja.com/2020/11/10/covid-19-shivamogga/
ಭದ್ರಾವತಿ, ಶಿಕಾರಿಪುರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ನಿರಂತರ ಇಳಿಕೆಯಾಗುತ್ತಿದ್ದು, ಶಿವಮೊಗ್ಗದಲ್ಲೂ ಅಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಆದರೂ ನಿತ್ಯ ನೂರರ ಮೇಲೆ ಪ್ರಕರಣಗಳು ಪತ್ತೆಯಾಗುತ್ತಿವೆ.
ಮಂಗಳವಾರದಂದು ಶಿವಮೊಗ್ಗ ತಾಲೂಕಿನಲ್ಲಿ 118, ಭದ್ರಾವತಿ 73, ತೀರ್ಥಹಳ್ಳಿ 18, ಶಿಕಾರಿಪುರ 46, ಸಾಗರ 36, ಹೊಸನಗರ 10, ಸೊರಬ 16 ಮತ್ತು ಬಾಹ್ಯ ಜಿಲ್ಲೆಯ 18 ಜನರಲ್ಲಿ ಸೋಂಕು ಕಂಡುಬಂದಿದೆ.
ಇಂದು 335 ಜನರಿಗೆ ಕೊರೊನಾ ಸೋಂಕು ಕಂಡುಬಂದಿದ್ದು, ಅದರಲ್ಲಿ 10 ವಿದ್ಯಾರ್ಥಿಗಳಿದ್ದಾರೆ. 740 ಜನರು ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆಯೂ ಹದ್ದುಬಸ್ತಿಗೆ ಬಂದಿದೆ. ಐವರು ನಿಧನರಾಗಿದ್ದಾರೆ.
ಹೋಮ್ ಐಸೋಲೇಷನ್ ಸಂಖ್ಯೆಯಲ್ಲಿ ಇಳಿಕೆ | ಪ್ರಕರಣಗಳು ಇಳಿಮುಖವಾಗುತ್ತಿದ್ದಂತೆಯೇ ಹೋಮ್ ಐಸೋಲೇಷನ್ ನಲ್ಲಿದ್ದು ಚಿಕಿತ್ಸೆ ಪಡೆಯುವವರ ಸಂಖ್ಯೆಯೂ ಕಡಿಮೆಯಾಗಿದೆ. ಇತ್ತೀಚೆಗೆ ಸಿಸಿಸಿಗೆ ಹೋಗುವುದನ್ನು ಕಡ್ಡಾಯಗೊಳಿಸಿರುವುದರಿಂದ ಮನೆ ಆರೈಕೆಯಲ್ಲಿರುವವರ ಪ್ರಮಾಣ ಕಡಿಮೆಯಾಗಿದೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 597, ಡಿಸಿಎಚ್‍ಸಿನಲ್ಲಿ 279, ಕೋವಿಡ್ ಕೇರ್ ಸೆಂಟರ್‍ನಲ್ಲಿ 1,479, ಖಾಸಗಿ ಆಸ್ಪತ್ರೆಯಲ್ಲಿ 1,009, ಹೋಮ್ ಐಸೋಲೇಷನ್‍ನಲ್ಲಿ 854, ಟ್ರಿಯೇಜ್‍ನಲ್ಲಿ 623 ಸೋಂಕಿತರಿದ್ದಾರೆ. 4,841 ಸಕ್ರಿಯ ಪ್ರಕರಣಗಳಿವೆ.
https://www.suddikanaja.com/2021/05/13/reduced-covid-case-in-shivamogga/