ಸುದ್ದಿ ಕಣಜ.ಕಾಂ
ಶಿವಮೊಗ್ಗ: ವಿವಿಧ ಕಾರಣಗಳಿಗಾಗಿ ವಿದೇಶಕ್ಕೆ ತೆರಳಲು ಉದ್ದೇಶಿಸಿರುವವರಿಗೆ ನಗರದ ತುಂಗಾ ನಗರ ಪ್ರಸೂತಿ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ವ್ಯವಸ್ಥೆ ಮಾಡಲಾಗಿದೆ.
READ | ಗಾಜನೂರು ಜಲಾಶಯದಿಂದ 33,700 ಕ್ಯೂಸೆಕ್ಸ್ ನೀರು ಹೊರಹರಿವು, ಹೆಚ್ಚುತ್ತಲೇ ಇದೆ ಡ್ಯಾಂನಲ್ಲಿ ನೀರಿನ ಮಟ್ಟ
ಪಡೆಯುವುದು ಹೇಗೆ | ವಿದ್ಯಾಭ್ಯಾಸ, ಉದ್ಯೋಗ, ಕ್ರೀಡಾ ಚಟುವಟಿಕೆ ಸೇರಿದಂತೆ ಯಾವುದೇ ಕಾರಣಗಳಿಗಾಗಿ ವಿದೇಶಕ್ಕೆ ತೆರಳ ಬಯಸುವವರು ಸಂಬಂಧಿಸಿದ ದಾಖಲೆಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ತೋರಿಸಿ, ನಿಗದಿತ ನಮೂನೆಯಲ್ಲಿ ಜಿಲ್ಲಾಧಿಕಾರಿ ಅವರ ಸಹಿಯನ್ನು ಪಡೆದುಕೊಂಡು ಲಸಿಕೆ ಪಡೆಯಬಹುದಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.