ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನ ಗಾಜನೂರು ಜಲಾಶಯದಿಂದ ಗುರುವಾರ ಮಧ್ಯಾಹ್ನ 1 ಗಂಟೆಯ ಬಳಿಕ 33,700 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗಿದೆ.
VIDEO REPORT
ಬೆಳಗ್ಗೆ 8 ಗಂಟೆಯಿಂದ 21,500 ಕ್ಯೂಸೆಕ್ಸ್, 11 ಗಂಟೆಯ ನಂತರ 2500ದಿಂದ 30000 ಕ್ಯೂಸೆಕ್ಸ್ ಹಾಗೂ ಮಧ್ಯಾಹ್ನ 1 ರ ಬಳಿಕ 33,700 ಕ್ಯೂಸೆಕ್ಸ್ ನೀರು ಹೊರಗೆ ಬಿಡಲಾಗಿದೆ.
ಮಲೆನಾಡಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಇನ್ನಷ್ಟು ನೀರು ಹರಿದು ಬರುವ ಸಾಧ್ಯತೆ ಇದೆ. ಪ್ರಸ್ತುತ ಮಳೆಯ ಅಬ್ಬರದಿಂದಾಗಿ ತುಂಗೆ ಉಕ್ಕಿ ಹರಿಯುತ್ತಿದೆ.
ಜಲಾಶಯದ ಯಾವುದೇ ಕಡೆಗೆ ದೃಷ್ಟಿ ಹಾಯಿಸಿದರೂ ಜಲಾವೃತವಾದ ದೃಶ್ಯ ಕಂಡುಬರುತ್ತಿದೆ.