ಕೋವಿಡ್ ಕೇರ್ ಸೆಂಟರ್ ನಲ್ಲಿ ಟಿವಿ ವ್ಯವಸ್ಥೆ, ದಿನಕ್ಕೆರಡು ಮೂವಿ ಪ್ರದರ್ಶನ

 

 

ಸುದ್ದಿ ಕಣಜ.ಕಾಂ
ಸಾಗರ: ಕೋವಿಡ್ ಕೇರ್ ಸೆಂಟರ್ ನಲ್ಲಿ ಮನೋರಂಜನೆ ದೃಷ್ಟಿಯಿಂದ ಟಿವಿ ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ವಿವಿಧ ಚಾನಲ್ ವೀಕ್ಷಿಸುವುದಕ್ಕೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.

ಜಂಬಗಾರು ಗ್ರಾಮದಲ್ಲಿರುವ ವಸತಿ ನಿಯಲದಲ್ಲಿ ಸಾಗರ ತಾಲೂಕು ವಿಡಿಯೋ ಮತ್ತು ಛಾಯಾಗ್ರಾಹಕರ ಸಂಘದಿಂದ ಈ ವ್ಯವಸ್ಥೆ ಮಾಡಲಾಗಿದೆ.
ನ್ಯೂಸ್ ಬದಲು ಎಂಟರ್ ಟೇನ್ಮೆಂಟ್ | ನ್ಯೂಸ್ ಚಾನಲ್ ಗಳನ್ನು ನೋಡಿದಾಗ ಕೊರೊನಾ ಸಂಬಂಧಪಟ್ಟ ಸಾವು, ನೋವುಗಳನ್ನು ವೀಕ್ಷಿಸುವುದರಿಂದ ಸೋಂಕಿತರಲ್ಲಿ ಇನ್ನಷ್ಟು ಭಯ ಮೂಡುವ ಸಾಧ್ಯತೆ ಇರುವುದರಿಂದ ದಿನಕ್ಕೆ ಎರಡು ಚಲನಚಿತ್ರಗಳನ್ನು ವೀಕ್ಷಿಸುವುದಕ್ಕೆ ಬೇಕಾದ ಎಲ್ಲ ಸವಲತ್ತುಗಳನ್ನು ಮಾಡಲಾಗುತ್ತಿದೆ.

error: Content is protected !!