ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆ, ಪರಿಹಾರಕ್ಕಾಗಿ ರಸ್ತೆಗಿಳಿದ ಎಬಿವಿಪಿ ಕಾರ್ಯಕರ್ತರು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬರುವ ಜುಲೈ 26ರಿಂದ ತರಗತಿಗಳು ಪುನರಾರಂಭವಾಗಲಿದ್ದು, ಕೋವಿಡ್ ಹಿನ್ನೆಲೆ ಆನ್ ಲೈನ್ ತರಗತಿಗಳ ಮೊರೆ ಹೋಗಬೇಕಾಗಿದೆ. ಹೀಗಾಗಿ, ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಬೇಕು ಎಂದು ಎಬಿವಿಪಿ ಆಗ್ರಹಿಸಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ವಿದ್ಯಾರ್ಥಿಗಳೊಂದಿಗೆ ಮಂಗಳವಾರ ಪ್ರತಿಭಟನೆಗಳಿದ ಸಂಘಟನೆಯ ಕಾರ್ಯಕರ್ತರು, ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಮನವಿ ಮಾಡಿದ್ದಾರೆ.

ಬಸ್ ಆರಂಭಿಸಿ | ಹಲವೆಡೆ ಇದುವರೆಗೆ ಬಸ್ ಆರಂಭಿಸಿಲ್ಲ. ಅದರಿಂದಾಗಿ ಹಾಸ್ಟೆಲ್ ನಲ್ಲಿ ಉಳಿದುಕೊಂಡರೂ ಓಡಾಡಲು ಸಾಧ್ಯವಾಗದ ಸ್ಥಿತಿ ಇದೆ. ಅದಕ್ಕಾಗಿ ಕೂಡಲೇ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಪುನರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಧನುಷ್ ಗೌಡ, ಶ್ರೀಪಾದ್, ಮಂಜು, ಬಸವರಾಜ್, ರಘುವೀರ್, ಲೋಹಿತ್, ಸಿಂಚನಾ ಭಾಗವಹಿಸಿದ್ದರು.

error: Content is protected !!