ಆಟೋ‌ ಓವರ್ ಟೇಕ್‌ ಮಾಡಲು ಹೋಗಿ ಜೀವ‌ ನುಂಗಿದ ಕಾರು ಚಾಲಕ, ಒಂದು ಸಾವು, ಉಳಿದವರಿಗೆ ಗಾಯ

 

 

ಸುದ್ದಿ‌ ಕಣಜ.ಕಾಂ
ಹೊಸನಗರ: ಆಟೋವೊಂದನ್ನು ಹಿಂದಿಕ್ಕಲು ಹೋಗಿ ಕಾರು ಚಾಲಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಮಹಿಳೆ ಮೃತಪಟ್ಟಿದ್ದಾಳೆ. ಉಳಿದವರಿಗೆ ಗಾಯಗಳಾಗಿವೆ.

READ | ಒಂದೇ ಕ್ಲಿಕ್ ನಲ್ಲಿ ಶಿವಮೊಗ್ಗ ಜಿಲ್ಲೆಯ ಇಂದಿನ ಎಲ್ಲ ಪ್ರಮುಖ ಸುದ್ದಿಗಳು

ಯಡಗುಡ್ಡೆ ಗ್ರಾಮದ ನಿವಾಸಿ ನೀಲಮ್ಮ(60) ಎಂಬಾಕೆ ತನ್ನದಲ್ಲದ ತಪ್ಪಿಗೆ ಮೃತಪಟ್ಟ ಮಹಿಳೆ. ಪದ್ಮಾವತಿ, ವಿಜಯೇಂದ್ರ ಮತ್ತು ಕೌಶಿಕ್ ಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತಿದ್ದಾರೆ.
ರಿಪ್ಪನಪೇಟೆಯ ಕಣಬಂದೂರು ಕ್ರಾಸ್ ಸಮೀಪ ಅಪಘಾತ ನಡೆದಿದೆ.
ತಮ್ಮ‌ ಗ್ರಾಮವಾದ ಯಡಗುಡ್ಡೆಯಿಂದ ಕಾರಿನಲ್ಲಿ‌ ರಿಪ್ಪನಪೇಟೆಗೆ ಹೋಗುತ್ತಿದ್ದರು.‌ ಈ ವೇಳೆ, ಮುಂದಿದ್ಸ ಆಟೋವನ್ನು ಹಿಂದಿಕ್ಕುವ ಪ್ರಯತ್ನಿಸಿದ ಕಾರು ಚಾಲಕ ನಿಯಂತ್ರಣ ತಪ್ಪಿ‌ ವಿದ್ಯುತ್ ಕಂಬಕ್ಕೆ‌‌ ಡಿಕ್ಕಿ‌ಹೊಡೆದಿದ್ದಾನೆ.‌ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದುಕೊಂಡು‌ಹೋಗುವಾಗ ಮಾರ್ಗ ಮಧ್ಯೆ ನೀಲಮ್ಮ‌ ಮೃತಪಟ್ಟಿದ್ದಾರೆ. ಉಳಿದವರ ಚಿಕಿತ್ಸೆ ನಡೆಯುತ್ತಿದೆ.

READ | ಮಳೆಯ ಆರ್ಭಟಕ್ಕೆ ಕುಸಿದ ಮನೆಗಳು, ಧರೆಗುರುಳಿದ ಮರಗಳು, ಜಲಾಶಯಗಳಲ್ಲಿ ಒಳಹರಿವು ಏರಿಕೆ, ತಾಲೂಕುವಾರು ಮಳೆ ವಿವರಕ್ಕಾಗಿ ಕ್ಲಿಕ್ಕಿಸಿ

ಮೃತಳ‌ ಗಂಡ ನಾಗರಾಜದ ನೀಡಿದ ದೂರಿನ ಮೇರೆಗೆ ರಿಪ್ಪನಪೇಟೆ‌ ಪೊಲೀಸ್‌ ಠಾಣೆಯಲ್ಲಿ‌‌ ಐಪಿಸಿ ಕಲಂ 279, 337, 304(A) ರಿತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುತ್ತಿದೆ.

https://www.suddikanaja.com/2020/11/20/bihar-man-found-in-sagar/

error: Content is protected !!