Eshwarappa property | ಯಡಿಯೂರಪ್ಪ ವಿರುದ್ಧವೇ ತೊಡೆತಟ್ಟಿರುವ ಈಶ್ವರಪ್ಪರ ಆಸ್ತಿ ಎಷ್ಟಿದೆ? ಈಶ್ವರಪ್ಪ ಮೇಲಿದೆ ಭಾರಿ ಸಾಲ!

KSE Nomination 2

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸ್ವಪಕ್ಷದ ವಿರುದ್ಧವೇ ಸಿಡಿದೆದ್ದಿರುವ ಕೆ.ಎಸ್.ಈಶ್ವರಪ್ಪ ಶುಕ್ರವಾರ ನಾಮಪತ್ರ (KS Eshwarappa nomination) ಸಲ್ಲಿಸಿದರು. ಅವರು ನಾಮಪತ್ರದಲ್ಲಿ 33.50 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ.

READ | ಕೆ.ಎಸ್.ಈಶ್ವರಪ್ಪ ನಾಮಪತ್ರ ಸಲ್ಲಿಕೆ, ಮೆರವಣಿಗೆಯಲ್ಲಿ ಮೋದಿ ತದ್ರೂಪಿ ಭಾಗಿ, ಗಾಂಧಿ ಬಜಾರ್ ನಲ್ಲೇ ಮೆರವಣಿಗೆ ಬಿಟ್ಟು ಹೋದ ಈಶ್ವರಪ್ಪ, ಏನೇನಾಯ್ತು? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಈಶ್ವರಪ್ಪರ ಅಫಿಡೆವಿಟ್ ನಲ್ಲಿ ಏನೇನಿದೆ, ಎಷ್ಟಿದೆ ಆಸ್ತಿ?

  • ಚರಾಸ್ತಿ 4.82 ಕೋಟಿ ರೂ, ಸ್ಥಿರಾಸ್ತಿ 22.35 ಕೋಟಿ ರೂ., ಪತ್ನಿ ಚರಾಸ್ತಿ 3.77 ಕೋಟಿ ರೂ. ಸೇರಿ ಒಟ್ಟು 33.50 ಕೋಟಿ ರೂ. ಆಸ್ತಿಯನ್ನು ಈಶ್ವರಪ್ಪ ಘೋಷಿಸಿದ್ದಾರೆ.
  • 2023-24ರಲ್ಲಿ ತಮ್ಮ ವಾರ್ಷಿಕ ಆದಾಯ 98.92 ಕೋಟಿ ರೂ. ಎಂದು ಅಫಿಡೆವಿಟ್ ನಲ್ಲಿ ಹೇಳಿಕೊಂಡಿದ್ದಾರೆ. ಪತ್ನಿ ಜಯಲಕ್ಷ್ಮೀ ಆದಾಯ 32.50 ಲಕ್ಷ ರೂ. ಎಂದು ಮಾಹಿತಿ ನೀಡಲಾಗಿದೆ.
  • ತಮ್ಮ ಕೈಯಲ್ಲಿ 25 ಲಕ್ಷ ರೂ. ನಗದು, ಪತ್ನಿ ಬಳಿ 2 ಲಕ್ಷ ರೂ. ನಗದು ಇರುವುದಾಗಿ ತಿಳಿಸಿದ್ದಾರೆ. ಚರಾಸ್ತಿ 4.28 ಕೋಟಿ ರೂ. ಹಾಗೂ ಪತ್ನಿ ಬಳಿ 3.77 ಕೋಟಿ ರೂ. ಇದೆ.
  • ಈಶ್ವರಪ್ಪ ಅವರ ಬಳಿ ಒಂದು ಕೃಷಿ ಜಮೀನು, ಮೂರು ಕೃಷಿಯೇತರ ಭೂಮಿ (ಪತಿ-ಪತ್ನಿ ಹೆಸರಲ್ಲಿ ಜಂಟಿಯಾಗಿ 1 ಕೃಷಿಯೇತರ ಭೂಮಿ, ಮಗನ ಜೊತೆ ಜಂಟಿಯಾಗಿ 1 ಕೃಷಿಯೇತರ ಭೂಮಿ ಸೇರಿ ಒಟ್ಟು ಮೂರು ಕೃಷಿಯೇತರ ಜಮೀನು) ಇದೆ.
  • ಬೆಂಗಳೂರಿನಲ್ಲಿ ಎರಡು ವಾಣಿಜ್ಯ ಸಂಕೀರ್ಣಗಳು ಸೇರಿ ಒಟ್ಟು 3 ವಾಣಿಜ್ಯ ಸಂಕೀರ್ಣಗಳು ಹಾಗೂ ಶಿವಮೊಗ್ಗದ ಜಂಟಿಯಾಗಿ ಮೂರು ಅಂತಸ್ತಿನ ವಾಸದ ಮನೆಯನ್ನು ದಂಪತಿ ಹೊಂದಿದ್ದಾರೆ.
  • ತಮ್ಮ ಹೆಸರಿನಲ್ಲಿ 22.35 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ ಪತ್ನಿ ಹೆಸರಿನಲ್ಲಿ 3.10 ಕೋಟಿ ರೂ. ಸ್ಥಿರಾಸ್ತಿ ಇದೆ.

ಈಶ್ವರಪ್ಪಗೆ 6.58 ಕೋಟಿ ರೂ. ಸಾಲ
ಕೆ.ಎಸ್.ಈಶ್ವರಪ್ಪ ತಮ್ಮ ಅಫಿಡೆವಿಟ್ ನಲ್ಲಿ ತಮಗೆ ಸಾಲ ಇರುವುದಾಗಿ ತೋರಿಸಿದ್ದಾರೆ. ತಮಗೆ 5.87 ಕೋಟಿ ರೂ. ಹಾಗೂ ಪತ್ನಿಗೆ 70.80 ಲಕ್ಷ ರೂ. ಸಾಲ ಇದೆ. ಅಷ್ಟೇ ಅಲ್ಲದೇ, ಪತ್ನಿ ಆದಾಯದಲ್ಲಿ ಮೂಲ ವೇತನ, ಬಾಡಿಗೆ, ವ್ಯಾಪಾರದ ಲಾಭ ಎಂದು ತೋರಿಸಲಾಗಿದೆ.

error: Content is protected !!