ಸೋಶಿಯಲ್ ಮೀಡಿಯಾದಲ್ಲಿ ಶುರುವಾಯ್ತು #AnanthnagforPadma ಅಭಿಯಾನ, ಘಟಾನುಘಟಿ ಸಿನಿ ತಾರೆಯರಿಂದ ಸಪೋರ್ಟ್

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ವಿಭಿನ್ನ ಪಾತ್ರಗಳ ಮೂಲಕ ಜನಮಾನಸ ಸೂರೆಗೊಂಡಿರುವ ಹಿರಿಯ ನಟ ಅನಂತ್ ನಾಗ್ ಅವರಿಗೆ ‘ಪದ್ಮ ಪ್ರಶಸ್ತಿ’ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

https://www.suddikanaja.com/2021/01/14/notice-to-actor-yash-for-kgf-chapter-2-teaser-with-cigarette-scene/

ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ #AnanthnagforPadma ಅಭಿಯಾನ ಕೂಡ ಶುರುವಾಗಿದೆ. ರಿಷಬ್ ಶೆಟ್ಟಿ ಈ ಸಂಬಂಧ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪತ್ರವೊಂದನ್ನು ಕೂಡ ಬರೆದಿದ್ದಾರೆ. ಜತೆಗೆ, ಹ್ಯಾಷ್ ಟ್ಯಾಗ್ ಮೂಲಕ ಬೆಂಬಲಿಸುವಂತೆ ಕೋರಿದ್ದಾರೆ.

Ananth nagರಿಷಬ್ ಶೆಟ್ಟಿ ಬರೆದಿರುವ ಪತ್ರದಲ್ಲಿ ಏನಿದೆ | ದೇಶದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಪದ್ಮತ್ರ ಪ್ರಶಸ್ತಿಗಳಿಗೆ ಮುಂದಿನ ವರ್ಷ ಅಂದರೆ 2022ರ ಸಾಲಿನಲ್ಲಿ ಯಾರು ಭಾಜನರಾಗಬೇಕು ಎಂಬುವ ಆಯ್ಕೆಯನ್ನು ಪ್ರಧಾನಿಗಳು ಜನತೆಗೆ ನೀಡಿರುವುದು ಪ್ರಶಂಸನೀಯ ನಡೆಯಾಗಿದೆ. ಸರ್ಕಾರದ ಬದಲಾಗಿ ದೇಶದ ಪ್ರಜೆಗಳೇ ಪ್ರಶಸ್ತಿಗೆ ತೀರ್ಪುಗಾರರಾಗಬೇಕು ಎಂಬುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
film beat logoಪ್ರಶಸ್ತಿ ಅರ್ಹ ಪ್ರತಿಭೆಗಳ ಕೈಸೇರಿದಾಗಲೇ ಅದಕ್ಕೆ ಶೋಭೆ. ನಮ್ಮಲ್ಲಿ ಅಂತಹ ಹಲವಾರು ಬೃಹತ್ ಪ್ರತಿಭೆಗಳಿವೆ. ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾದ ಹಿರಿಯ ನಟ ಅನಂತ್ ನಾಗ್ ಅವರು ಒಬ್ಬ ಚಿತ್ರನಟ, ಕನ್ನಡ ಭಾಷೆ, ನಾಡು, ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಎಂತಹುದ್ದೇ ಪಾತ್ರವಾಗಲಿ ಅತ್ಯಂತ ಲೀಲಾಜಾಲವಾಗಿ ಅಭಿನಯಿಸಿ, ಚಿತ್ರರಸಿಕರ ಮನಗೆಲ್ಲುತ್ತಾ ಬಂದಿರುವ ಈ ‘ಅಭಿಯನ ಬ್ರಹ್ಮ’ನಿಗೆ ಪದ್ಮ ಪ್ರಶಸ್ತಿಯೊಂದು ಸಲ್ಲಬೇಕಿರುವುದು ನ್ಯಾಯವೇ ಸರಿ ಎಂದು ಪತ್ರದಲ್ಲಿ ಬರೆದಿದ್ದಾರೆ.
ಅದಕ್ಕಾಗಿ, ನಾವೆಲ್ಲರೂ ಒಂದುಗೂಡಿ ನಮ್ಮ ನಾಡಿನ ಪರವಾಗಿ ಅನಂತ್ ನಾಗ್ ಅವರನ್ನು #PeoplesPadma ಗೆ ನಾಮ ನಿರ್ದೇಶಿಸೋಣ ಎಂದು ಕರೆ ನೀಡಿದ್ದಾರೆ. ಇದಕ್ಕೆ ಸೆಪ್ಟೆಂಬರ್ 15ರ ವರೆಗೆ ಸಮಯವಿದ್ದು, ಅಲ್ಲಿಯವರೆಗೂ #AnanthnagforPadma ಎಂಬ ಹ್ಯಾಷ್ ಟ್ಯಾಗ್ ಬಳಸುವ ಮೂಲಕ ಎಲ್ಲರೂ ಇದಕ್ಕೆ ಬೆಂಬಲಿಸೋಣ ಎಂದು ಕರೆ ನೀಡಿದ್ದಾರೆ. ಈ ಪತ್ರವನ್ನು ಹಲವರು ರೀಟ್ವಿಟ್ ಕೂಡ ಮಾಡಿದ್ದಾರೆ.
ಹಲವರ ಬೆಂಬಲ | ಚಂದನವನದ ಹಲವು ನಟರು ಇದಕ್ಕೆ ಬೆಂಬಲ ಸೂಚಿಸಿ ಟ್ವಿಟ್ ಕೂಡ ಮಾಡಿದ್ದಾರೆ. ಜತೆಗೆ, ಸಾರ್ವಜನಿಕರು ಹ್ಯಾಷ್ ಟ್ಯಾಗ್ ಬಳಸಿ ಟ್ವಿಟ್ ಮಾಡಿದ್ದಾರೆ.

https://www.suddikanaja.com/2021/03/12/roberrt-movie-collection-in-box-office/

error: Content is protected !!