ಭದ್ರಾವತಿಯ ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನ, ಆರೋಪಿ ಬಂಧನ

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ಬಿ.ಎಚ್.ರಸ್ತೆಯಲ್ಲಿರುವ ಬ್ಯಾಂಕ್ ವೊಂದರ ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಅರಳಿಹಳ್ಳಿ‌ ಬಸಲಿಕಟ್ಟೆ ನಿವಾಸಿ ಅಸಾದುಲ್ಲಾ (32) ಬಂಧಿತ ಆರೋಪಿ.
ಜುಲೈ 5ರಂದು ಎಟಿಎಂ ಒಳಗೆ ಪ್ರವೇಶಿಸಿದ ವ್ಯಕ್ತಿಯು ಸಲಕರಣೆಗಳನ್ನು ಬಳಸಿ ಡೆಪಾಸಿಟ್ ಮೆಷಿನ್ ಹೊರಗೆ ತೆಗೆದಿದ್ದ. ಬ್ಯಾಂಕ ಶಾಖೆ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

error: Content is protected !!