ಸುದ್ದಿ ಕಣಜ.ಕಾಂ
ಸೊರಬ: ನಡು ಬೀದಿಯಲ್ಲಿ ಪತ್ನಿಯ ಕತ್ತು ಸೀಳಿ ಕೊಲೆಗೆ ಯತ್ನಿಸಲಾಗಿದೆ. ತಾಲೂಕಿನ ತವನಂದಿ ರಸ್ತೆಯ ಹಳೇ ಸೊರಬ ಗ್ರಾಮದಲ್ಲಿ ಘಟನೆ ನಡೆದಿದೆ.
ಅಕ್ರಮ ಸಂಬಂಧ ಶಂಕೆ | ಪತ್ನಿಯು ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ಈ ಕಾರಣಕ್ಕೆ ಮಂಗಳವಾರ ಪತಿಯು ಕೊಲೆಗೆ ಯತ್ನಿಸಿದ್ದಾನೆ.
ಪತ್ನಿಯು ಆಟೋದಲ್ಲಿ ಅಕ್ಕನ ಮನೆಗೆ ಹೋಗುತ್ತಿದ್ದಾಗ ಆಟೋ ಅಡ್ಡಗಟ್ಟಿ ಚಾಕುವಿನಿಂದ ಕತ್ತಿಗೆ ಇರಿದ್ದಾನೆ. ರಸ್ತೆಯ ಮೇಲೆಯೇ ರಕ್ತ ಚೆಲ್ಲಿದ್ದು, ತಕ್ಷಣ ಆಕೆಯನ್ನು ಸೊರಬದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಹೆಚ್ಚುವರಿ ಚಿಕಿತ್ಸೆಗಾಗಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿದೆ.