ನೂರರ ಕೆಳಗಿಳಿದ ಸೋಂಕಿತರ ಸಂಖ್ಯೆ, ತಾಲೂಕುವಾರು ಮಾಹಿತಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸೋಂಕಿತರ ಸಂಖ್ಯೆ ಶುಕ್ರವಾರ ನೂರರ ಕೆಳಗೆ ಇಳಿದಿದ್ದು, ಮೂವರು ಮೃತಪಟ್ಟಿದ್ದಾರೆ.
ಶುಕ್ರವಾರ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿ ಪ್ರಕಾರ, 97 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 16 ವಿದ್ಯಾರ್ಥಿಗಳು, ಒಬ್ಬರು ಕಾಲೇಜು ಸಿಬ್ಬಂದಿ ಇದ್ದಾರೆ. ಜನ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ 95 ಬಿಡುಗಡೆ ಹೊಂದಿದ್ದಾರೆ.

https://www.suddikanaja.com/2021/06/16/corona-positive-case-decrease-in-shivamogga/

ತಾಲೂಕುವಾರು ವರದಿ | ಶಿವಮೊಗ್ಗ 45, ಭದ್ರಾವತಿ 23, ತೀರ್ಥಹಳ್ಳಿ 9 ಶಿಕಾರಿಪುರ 4, ಸಾಗರ 7, ಹೊಸನಗರ 8, ಸೊರಬ 8 ಮತ್ತು ಬಾಹ್ಯ ಜಿಲ್ಲೆಯ 0 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 4,296 ಜನರ ಮಾದರಿಯಗಳನ್ನು ಸಂಗ್ರಹಿಸಲಾಗಿದೆ. 3,950 ವರದಿ ನೆಗೆಟಿವ್ ಇರುವುದು ದೃಢಪಟ್ಟಿದೆ.
ಸಕ್ರಿಯ ಪ್ರಕರಣ ಇಳಿಕೆ | ಮೆಗ್ಗಾನ್ ಆಸ್ಪತ್ರೆಯಲ್ಲಿ 185, ಡಿಸಿಎಚ್‍ಸಿಯಲ್ಲಿ 98, ಕೋವಿಡ್ ಕೇರ್ ಸೆಂಟರ್ ನಲ್ಲಿ 197, ಖಾಸಗಿ ಆಸ್ಪತ್ರೆಯಲ್ಲಿ 142, ಹೋಮ್ ಐಸೋಲೇಷನ್ ನಲ್ಲಿ 329, ಟ್ರಿಯೇಜ್ ಸೆಂಟರ್ ನಲ್ಲಿ 55 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕ್ರಿಯ ಪ್ರಕರಣಗಳು 1,006 ಇವೆ.

https://www.suddikanaja.com/2021/05/21/corona-case-increase-in-shivamogga-2/

error: Content is protected !!