ರೈಲು ಪ್ರಯಾಣಕ್ಕೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ, ಇನ್ನಷ್ಟು ಕಂಡಿಷನ್ ವಿಧಿಸಿದ ರೈಲ್ವೆ ಇಲಾಖೆ, ರೈಲು ಹತ್ತುವ ಮುನ್ನ ಇದನ್ನು ಓದಿ

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ರೈಲ್ವೆ ಸೇವೆಯನ್ನೇನೋ ಆರಂಭಿಸಲಾಗಿದೆ. ಆದರೆ, ಪ್ರಯಾಣಿಕರಿಗೆ ಕೆಲವು ಕಂಡಿಷನ್ ಗಳನ್ನು ವಿಧಿಸಲಾಗಿದೆ. ಅದರಂತೆ, 72 ಗಂಟೆಯೊಳಗೆ ಕೋವಿಡ್ ನೆಗೆಟಿವ್ ವರದಿ ಹೊಂದಿರಲೇಬೇಕು ಎಂಬ ನಿಗಮ ವಿಧಿಸಲಾಗಿದೆ.

READ | ಕನ್ನಡಕ್ಕಾದ ಅವಮಾನ, ಸರಿಪಡಿಸಿಕೊಂಡ ಕೇಂದ್ರ, ‘ಪ್ರೈಡ್’ ತರೆಬೇತಿಗೆ ಸೇರಿದ ಲಿಪಿಗಳ ರಾಣಿ

ಏನೇನು ಕಂಡಿಷನ್ | ಮಹಾರಾಷ್ಟ್ರ ಮತ್ತು‌ ಕೇರಳಾದಿಂದ ಕರ್ನಾಟಕಕ್ಕೆ ಬರುವವರು ಕಡ್ಡಾಯವಾಗಿ 72 ಗಂಡೆಯೊಳಗೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗೆ ಒಳಪಟ್ಟ ನೆಗೆಟಿವ್ ವರದಿಯನ್ನು ಪ್ರಯಾಣದ ವೇಳೆ ಜೊತೆಯಲ್ಲಿ ತರಬೇಕು. ನೆಗೆಟಿವ್ ವರದಿ ನೋಡಿದ ಬಳಿಕವೇ ರೈಲು ಹತ್ತಲು ಅವಕಾಶ ನೀಡಲಾಗುವುದು ಎಂದು ನೈರುತ್ಯ ರೈಲ್ವೆ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸೂಚನೆ ನೀಡಲಾಗಿದೆ.

READ | ಇಲ್ಲಿದೆ ಉದ್ಯೋಗ ಅವಕಾಶ, ಮಹಿಳಾ ಮಿಲಿಟರಿ ಪೊಲೀಸ್ ನೇಮಕಾತಿಗೆ ಅರ್ಜಿ ಆಹ್ವಾನ

ಒಂದುವೇಳೆ, ಪ್ರಯಾಣಿಕರು ಒಂದು ಡೋಸ್ ಕೊರೊನಾ ಲಸಿಕೆ ಪಡೆದಿದ್ದರೆ ಅಂತಹವರಿಗೆ ನೆಗೆಟಿವ್ ವರದಿಯ ಅವಶ್ಯಕತೆ ಇರುವುದಿಲ್ಲ. ಆದರೆ, ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ‌.
ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ರೈಲ್ವೆ ಇಲಾಖೆ ಕಟ್ಟುನಿಟ್ಟಿನ ನಿಯಮಗಳನ್ನು ಕೈಗೊಳ್ಳಲು ಮುಂದಾಗಿದೆ‌.

https://www.suddikanaja.com/2021/02/09/rdpr-minister-ks-eshwarappa-reaction-on-protest-against-agricultural-act/

error: Content is protected !!