ಶಿವಮೊಗ್ಗ ಜಿಲ್ಲೆಯಲ್ಲಿ ಹೊಸದಾಗಿ ದಾಖಲಾಗುತ್ತಿರುವ ಕೊರೊನಾ ಸಂಖ್ಯೆಯಲ್ಲಿ ಭಾರಿ ಇಳಿಕೆ, ಟ್ರಿಯೇಜ್ ಸೆಂಟರ್ ಕುಸಿದ ಬೇಡಿಕೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಟ್ರಿಯೇಜ್ ಕೇಂದ್ರಕ್ಕೆ ಹೊಸದಾಗಿ ಬರುವ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಪ್ರಸ್ತುತ 9 ಜನ ಮಾತ್ರ ಟ್ರಿಯೇಜ್ ನಲ್ಲಿದ್ದಾರೆ. ಸಕ್ರಿಯ ಪ್ರಕರಣಗಳು ಕೂಡ ಇಳಿಕೆಯಾಗಿದೆ.

https://www.suddikanaja.com/2021/07/15/rain-in-shivamogga-5/

ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 2,356 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಹಳೆಯದ್ದೂ ಸೇರಿ ಒಟ್ಟು 4,913 ವರದಿಗಳು ನೆಗೆಟಿವ್ ಇರುವುದು ದೃಢಪಟ್ಟಿದೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 115 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ, ಡಿಸಿಎಚ್‍ಸಿ 56, ಕೋವಿಡ್ ಕೇರ್ ಸೆಂಟರ್ ನಲ್ಲಿ 61, ಖಾಸಗಿ ಆಸ್ಪತ್ರೆಯಲ್ಲಿ 29, ಹೋಮ್ ಐಸೋಲೇಷನ್ ನಲ್ಲಿ 264 ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ 534 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, ಜಿಲ್ಲೆಯಲ್ಲಿ ಬುಧವಾರ 75 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 118 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ 27, ಭದ್ರಾವತಿ 20, ತೀರ್ಥಹಳ್ಳಿ 11, ಶಿಕಾರಿಪುರ 5, ಸಾಗರ 3, ಹೊಸನಗರ 5, ಸೊರಬ 0, ಬಾಹ್ಯ ಜಿಲ್ಲೆಯ 4 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.
ಏನಿದು ಟ್ರಿಯೇಜ್ ಸೆಂಟರ್ | ಕೊರೊನಾ ವೈರಸ್ ಸೋಂಕಿತರ ವರದಿ ಪಾಸಿಟಿವ್ ಬಂದಾಕ್ಷಣ ಅವರನ್ನು ಟ್ರಿಯೇಜ್ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅವರ ಆರೋಗ್ಯದ ಸ್ಥಿತಿಯನ್ನು ಮನಗಂಡು ಖಾಸಗಿ, ಮೆಗ್ಗಾನ್ ಇಲ್ಲವೇ ಹೋಮ್ ಐಸೋಲೇಷನ್ ಗೆ ಕಳುಹಿಸಬೇಕೋ ಎಂಬುವುದನ್ನು ನಿರ್ಧರಿಸಲಾಗುತ್ತಿದೆ.

https://www.suddikanaja.com/2020/11/10/covid-19-shivamogga/

error: Content is protected !!