ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ/ಸಾಗರ: ಪುಷ್ಯ ಮಳೆ ಬಿಡುವು ನೀಡಿದೆ. ಆದರೆ, ಆವಾಂತರಗಳು ಮಾತ್ರ ಇನ್ನೂ ನಿಂತಿಲ್ಲ. ತೀರ್ಥಹಳ್ಳಿ ಭಾಗದಲ್ಲಿ ಹಲವೆಡೆ ಗುಡ್ಡ ಕುಸಿತವಾಗಿದ್ದು, ಜನರು ಆತಂಕದಲ್ಲಿ ದಿನಗಳನ್ನು ದೂಡುವಂತಾಗಿದೆ.
https://www.suddikanaja.com/2021/04/01/final-report-of-land-sliding-in-malendu-submitted-to-cm-yadiyurappa/
ಕಳೆದ ಒಂದು ವಾರದಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಸುರಿದ ಮಳೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಭಾರತೀಪುರ, ಹುಲಿಗುಡ್ಡ, ಯಡೇಹಳ್ಳಿಕೆರೆ, ಕೋಳಿಕಾಲುಗುಡ್ಡ ವಿವಿಧೆಡೆ ಗುಡ್ಡ ಕುಸಿತ ಉಂಟಾಗಿದೆ. ಭಾರತೀಪುರ ಪ್ರದೇಶವೊಂದರಲ್ಲಿಯೇ ಸ್ಥಳಿಯರು ಹೇಳುವಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಗುಡ್ಡ ಕುಸಿತವಾಗಿದೆ.
ಹೆಗಲತ್ತಿ ಘಟನೆ ಮಾಸುವ ಮುನ್ನವೇ ಹುಲಿಗುಡ್ಡದಲ್ಲೂ ಗುಡ್ಡ ಕುಸಿತ | ಕಳೆದ ವರ್ಷ ವರ್ಷಗಳ ಹಿಂದೆ ಹೆಗಲತ್ತಿಯಲ್ಲಿ ಭಾರಿ ಗುಡ್ಡ ಕುಸಿತ ಉಂಟಾಗಿ ಗುಡ್ಡದ ಕೆಳಗಡೆ ವಾಸವಾಗಿರುವವರು ಭೀತಿಗೀಡಾಗುವಂತೆ ಮಾಡಿತ್ತು. ಈಗ ಅಂಬಳಿಕೆ ಗ್ರಾಮದ ಹುಲಿಗುಡ್ಡದಲ್ಲಿ ಕುಸಿತವಾಗಿದೆ. ಬಾಂದಡ್ಲು ಗ್ರಾಮದ ಸಂಪರ್ಕಕ್ಕಾಗಿ ಗ್ರಾಮಸ್ಥರೇ ನಿರ್ಮಿಸಿದ್ದ ಕಾಲು ಸಂಕ ಕೂಡ ಅವಸಾನದ ಅಂಚಿನಲ್ಲಿದ್ದು, ಮಳೆ ಮುಂದುವರಿದರೆ ಅದಕ್ಕೂ ಹಾನಿಯಾಗುವ ಸಾಧ್ಯತೆ ಇದೆ. ಆಗ ಗ್ರಾಮಕ್ಕೆ ಸಂಪರ್ಕವೇ ಕಡಿತಗೊಳ್ಳುವ ಸಾಧ್ಯತೆ ಇದೆ.
ಸಾಗರದಲ್ಲೂ ಭಾರಿ ಅನಾಹುತ | ಸಾಗರ ತಾಲೂಕಿನ ಭೀಮನೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರವಾಳದಲ್ಲಿ ಮನೆಯೊಂದು ಪೂರ್ತಿ ಕುಸಿತವಾಗಿದೆ. ಶಾಸಕ ಹಾಲಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರ ಅಹವಾಲುಗಳನ್ನೂ ಸ್ವೀಕರಿಸಿದ್ದಾರೆ.
ಸಾಗರದ ಬೀಸನಗದ್ದೆಯಲ್ಲಿ ಭಾರಿ ನೆರೆಯಿಂದಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಸಾರ್ವಜನಿಕರ ರಕ್ಷಣೆಗಾಗಿ ಬೋಟ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಮೆಳವರಿಗೆ ಕೆರೆ ಬಳಿ ರಸ್ತೆಯೇ ಕೊಚ್ಚಿಕೊಂಡು ಹೋಗಿದೆ.
ಮನೆ, ಗುಡ್ಡ ಕುಸಿತದಿಂದಾಗಿ ಸಾರ್ವಜನಿಕರು ಸಂಕಷ್ಟದಲ್ಲಿದ್ದು ಆಡಳಿತ ಯಂತ್ರ ಇವರೆಡೆಗೆ ಗಮನಹರಿಸಬೇಕಿದೆ.
https://www.suddikanaja.com/2021/07/23/heavy-rainfall-created-flood-in-shivamogga-district/