ಭದ್ರಾ ಜಲಾಶಯ ಕಾಮಗಾರಿ ಟೆಸ್ಟ್ ಗೆ ತಜ್ಞರ ತಂಡ, 10 ದಿನಗಳಲ್ಲಿ ವರದಿ ಸಲ್ಲಿಕೆಗೆ ಡೆಡ್‍ಲೈನ್

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ಭಾರಿ ಆರೋಪ ಹಾಗೂ ಆಕ್ರೋಶಗಳಿಗೆ ಗುರಿಯಾಗಿದ್ದ ಭದ್ರಾ ಜಲಾಶಯದ ಸ್ಟಿಲ್ಲಿಂಗ್ ಬೇಸಿನ್ ಕಾಮಗಾರಿಯ ಸತ್ಯಾಸತ್ಯತೆ ಪರಿಶೀಲನೆಗೆ ತಜ್ಞರ ರಚನೆ ಮಾಡಲಾಗಿದೆ. ತನಿಖೆ ಕೈಗೊಂಡು ವರದಿ ಸಲ್ಲಿಸಲು 10 ದಿನಗಳ ಗಡುವು ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

https://www.suddikanaja.com/2021/01/12/young-man-dead-in-gajanur-dam-shivamogga/

ಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಸಚಿವರು ಕೊಚ್ಚಿ ಹೋಗಿರುವ ಸ್ಟಿಲ್ಲಿಂಗ್ ಬೇಸಿನ್ ಅನ್ನು ವೀಕ್ಷಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ನಿವೃತ್ತ ಮುಖ್ಯ ಎಂಜಿನಿಯರ್ ಚೆಲುವರಾಜ್, ಶಿವಪ್ರಸಾದ್ ಸೇರಿ ಮೂವರು ತಜ್ಞರ ತಂಡದಲ್ಲಿದ್ದಾರೆ. ವರದಿ ಕೈಸೇರಿದ ಬಳಿಕ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

2016-17ರಲ್ಲಿ ಆರು ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡ ಸ್ಟಿಲ್ಲಿಂಗ್ ಬೇಸಿನ್ ಕಾಮಗಾರಿಯು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಹಲವು ಆರೋಪಗಳು ಕೇಳಿಬಂದಿವೆ. ಅಕ್ರಮ ಕಾಮಗಾರಿ ಎಂದು ರೈತ ಹೋರಾಟಗಾರರು ಆರೋಪಿಸಿದ್ದಾರೆ. ಈ ಎಲ್ಲ ಅಂಶಗಳು ತನಿಖೆಯ ಬಳಿಕ ಗಮನಕ್ಕೆ ಬರಲಿವೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ರೈತ ಸಂಘ ಮುಖಂಡ ಕೆ.ಟಿ.ಗಂಗಾಧರ್ ಉಪಸ್ಥಿತರಿದ್ದರು.

https://www.suddikanaja.com/2021/05/17/covid-3rd-wave/

error: Content is protected !!