ಗೇರುಸೊಪ್ಪ ರೇಡಿಯಲ್ ಗೇಟ್‍ನಿಂದ ನೀರು ಹೊರಬಿಡುವ ಸಾಧ್ಯತೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶರಾವತಿ ಯೋಜನೆಯ ಗೇರುಸೊಪ್ಪ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿದ್ದು, ಇದೇ ರೀತಿ ಮುಂದುವರಿದರೆ ರೇಡಿಯಲ್ ಗೇಟ್ ಗಳ ಮೂಲಕ ನೀರನ್ನು ಹೊರಬಿಡಲಾಗುವುದು ಎಂದು ಕೆಪಿಸಿಎಲ್ ಪ್ರಕಟಣೆ ತಿಳಿಸಿದೆ.
ಸತತವಾಗಿ ಸುಳಿಯುತ್ತಿರುವ ಮಳೆಯಿಂದ ಜಲಾಶಯದ ನೀರಿನ ಮಟ್ಟವು ಏಕ ಪ್ರಕಾರವಾಗಿ ಏರುತ್ತಿದೆ. ಇದೇ ರಈತಿ ಜಲಾಶಯಕ್ಕೆ ನೀರಿನ ಒಳಹರಿವು ಮುಂದುವರಿದ ಪಕ್ಷದಲ್ಲಿ ಹಾಗೂ ಎಸ್.ಎಲ್.ಡಿ.ಸಿ. (ಸ್ಟೇಟ್ ಲೋಡ್ ಡಿಸ್ಪ್ಯಾಚ್ ಸೆರ್) ವತಿಯಿಂದ ವಿದ್ಯುತ್ ಉತ್ಪಾದನೆಗಾಗಿ ಬೇಡಿಕೆ ಬಾರದಿದ್ದರೆ ಗೇರುಸೊಪ್ಪ ಜಲಾಶಯವು ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ. ಹೀಗಾಗಿ, ಗೇರುಸೊಪ್ಪ ಅಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ವಿದ್ಯುತ್ ಉತ್ಪಾದನೆಯಿಂದ ಹೊರಬಿಡುವ ನೀರಿನ ಪ್ರಮಾಣದಷ್ಟೇ ನೀರನ್ನು ರೇಡಿಯಲ್ ಗೇಟ್ ಗಳ ಮೂಲಕ ಹೊರಬಿಡಲಾಗುವುದು ಎಂದು ತಿಳಿಸಲಾಗಿದೆ.

error: Content is protected !!