ಶಿವಮೊಗ್ಗದಲ್ಲಿ ಧಾರಾಕಾರ ಮಳೆ, ಹೆಚ್ಚಿದ ತುಂಗಾ ನದಿಯ ಆರ್ಭಟ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಗುರುವಾರ ಬೆಳಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ತುಂಗಾ ನದಿ ಆರ್ಭಟ ಹೆಚ್ಚಿದೆ.

READ | ಪುರಲೆ ಕೆರೆಗೆ ಹಾರಿದ ಕಿಡ್ನಿ ಸಮಸ್ಯೆಯಿಂದ ಬಳಲುತಿದ್ದ ಯುವಕ, ಧಾರಾಕಾರ ಮಳೆಯ ನಡುವೆಯೇ ಯುವಕನಿಗಾಗಿ ಹುಡುಕಾಟ

ಗಾಜನೂರು ಜಲಾಶಯ ಜಲಾನಯನ ಪ್ರದೇಶದಲ್ಲಿ ಭಾರಿ ವರ್ಷಧಾರೆಯಿಂದಾಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ನೀರಿನ ಪ್ರಮಾಣದಲ್ಲಿ ನಿರಂತರ ಏರಿಕೆಯಾಗುತ್ತಿರುವುದರಿಂದ ಗುರುವಾರ ಸಂಜೆಯ ಹೊತ್ತಿಗೆ 50,500 ಕ್ಯೂಸೆಕ್ಸ್ ನೀರು ಹೊಳೆಗೆ ಬಿಡಲಾಗಿದೆ. ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಎಇಇ ತಿಳಿಸಿದ್ದಾರೆ.

ಮಳೆ ಇದೇ ರೀತಿ ಮುಂದುವರಿದರೆ ಇನ್ನಷ್ಟು ನೀರನ್ನು ಜಲಾಶಯದಿಂದ ಹೊರಬಿಡಲಾಗುವುದು ಎಂದು ಹೇಳಿದ್ದಾರೆ.

error: Content is protected !!