ಶಿವಮೊಗ್ಗದಲ್ಲಿ ಪುಷ್ಯ ಮಳೆಯ ಆರ್ಭಟ, ಮಲೆನಾಡಿನಾದ್ಯಂತ ಥಂಡಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸೋಮವಾರ ಬಿಡುವು ನೀಡಿದ್ದ ಮಳೆ ಮಂಗಳವಾರ ಮತ್ತೆ ಧಾರಾಕಾರವಾಗಿ ಸುರಿಯುತ್ತಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 48.4 ಎಂಎಂ ಮಳೆ ಸುರಿದಿದೆ. ವಾಡಿಕೆಗಿಂತ ಶೇ.83ರಷ್ಟು ಅಧಿಕ ಮಳೆಯಾಗಿದೆ.

ಶಿವಮೊಗ್ಗ ತಾಲೂಕಿನಲ್ಲಿ ಜುಲೈ 18ರಂದು 34.0 ಎಂಎಂ ಮಳೆಯಾಗಿದ್ದು, 19ರಂದು ಅದರ ಪ್ರಮಾಣ 0.8ಗೆ ಇಳಿಕೆಯಾಗಿತ್ತು. ಆದರೆ, ಇಂದು ವರ್ಷಧಾರೆ ಜೋರಾಗಿದೆ. ಭಾರಿ ಮಳೆಯಿಂದಾಗಿ ಚುಮು ಚುಮು ಚಳಿಯಿದ್ದು, ಮಲೆನಾಡು ಥಂಡಿ ಹಿಡಿದಂತಾಗಿದೆ.
ಜಲಾಶಯಗಳಲ್ಲಿ ನೀರಿನ ಮಟ್ಟ | ಲಿಂಗನಮಕ್ಕಿಯಲ್ಲಿ 1793.90 ಅಡಿ ನೀರಿದ್ದು, 21,274 ಕ್ಯೂಸೆಕ್ಸ್ ಒಳಹರಿವು ಇದೆ. ಭದ್ರಾದಲ್ಲಿ 165.7 ಅಡಿ ನೀರಿದ್ದು, 12,355 ಕ್ಯೂಸೆಕ್ಸ್ ಒಳಹರಿವು ಇದೆ. ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಉತ್ತಮ ಮಳೆ ಇರುವುದರಿಂದ ಗಾಜನೂರು ಜಲಾಶಯಕ್ಕೆ 25,316 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಅದನ್ನು ನದಿಗೆ ಹರಿಸಲಾಗುತ್ತಿದೆ.

error: Content is protected !!