7 ತಿಂಗಳಲ್ಲಿ ಶಿವಮೊಗ್ಗಯಲ್ಲಿ ಪತ್ತೆಯಾದ ಡೆಂಗ್ಯೂ, ಚಿಕೂನ್‍ಗೂನ್ಯ ಪ್ರಕರಣಗಳೆಷ್ಟು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣ ಕಂಡು ಬಂದಿಲ್ಲ. ಡೆಂಗ್ಯೂ ಜ್ವರ ಜನವರಿಯಿಂದ ಇಲ್ಲಿಯವರೆಗೆ 158 ಪ್ರಕರಣ ಮಾತ್ರ ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ದಿನೇಶ್ ಹೇಳಿದರು.

https://www.suddikanaja.com/2021/01/04/fund-raising-for-the-construction-of-srirama-mandir/

ನಗರದಲ್ಲಿ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ವಿಭಾಗದ ವತಿಯಿಂದ ಶನಿವಾರ ಆಯೋಜಿಸಿದ್ದ ಕೀಟ ಜನ್ಯ ಸಾಂಕ್ರಾಮಿಕ ರೋಗಗಳ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಳೆದ ಏಳು ತಿಂಗಳುಗಳಲ್ಲಿ 85 ಚಿಕೂನ್ ಗೂನ್ಯ ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ, ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಹತೋಟಿಯಲ್ಲಿದೆ ಎಂದರು.

ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿದರು. ಕೀಟಶಾಸ್ತ್ರ ತಜ್ಞ ಪರಶುರಾಮ್ ನಾಯ್ಕ್ ಪ್ರಾತ್ಯಕ್ಷಿಕೆ ಮೂಲಕ ಸಾಂಕ್ರಾಮಿಕ ರೋಗಗಳ ಹರಡುವಿಕೆ ಮತ್ತು ಪರಿಹಾರದ ಬಗ್ಗೆ ಹಾಗೂ ಸೊಳ್ಳೆಗಳ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರತಿಭಾ ಇದ್ದರು.

https://www.suddikanaja.com/2021/03/23/criminal-case-for-violating-the-sand-guidelines/

error: Content is protected !!