ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ಕೈದಿ ಕೊಲೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ‌ ಗೊಂದಲ, ವಾಸ್ತವದಲ್ಲಿ ನಡೆದಿದ್ದೇನು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೈದಿಗಳ ನಡುವೆ ಹಳೇ ದ್ವೇಷಕ್ಕಾಗಿ ಗುರುವಾರ ಬೆಳಗ್ಗೆ ನಡೆದ ಗಲಾಟೆ ಜೈಲು ಮುಂಭಾಗದಲ್ಲಿ ಹೈಡ್ರಾಮಾವನ್ನೇ ಸೃಷ್ಟಿಸಿದೆ. ಇದನ್ನು ತುಂಗಾನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ನಿಯಂತ್ರಿಸುವಲ್ಲಿ ಸಫಲರಾಗಿದ್ದಾರೆ.

https://www.suddikanaja.com/2020/11/29/robbery-in-sorab/

‘ಸಲ್ಮಾನ್ ಎಂಬಾತನ ಕೊಲೆಯಾಗಿದೆ’ ಎಂಬ ಸುಳ್ಳು ಸುದ್ದಿ ಶಿವಮೊಗ್ಗದಲ್ಲಿರುವ ಆತನ ಕುಟುಂಬದವರಿಗೆ ಗೊತ್ತಾಗಿದ್ದೇ ಈ ಎಲ್ಲ‌ ಗೊಂದಲಗಳಿಗೆ ಕಾರಣ!
ನಡೆದಿದ್ದೇನು‌ | ಗುರುವಾರ ಬೆಳಗ್ಗೆ ಸಲ್ಮಾನ್ ಹಾಗೂ ಹಂದಿ ಅಣ್ಣಿಯ ಗ್ಯಾಂಗ್ ನಡುವೆ ಜೈಲಿನಲ್ಲಿಯೇ ಹಳೇ ದ್ವೇಷಕ್ಕಾಗಿ ಗಲಾಟೆ ನಡೆದಿದೆ. ನಂತರ, ಮಾರಾಮಾರಿಯಲ್ಲಿ ಸಲ್ಮಾನ್ ಕೊಲೆಯಾಗಿದ್ದಾನೆ ಎಂಬ ಸುಳ್ಳು ಸುದ್ದಿಯನ್ನು ಫೋನ್ ಮೂಲಕ‌ ತಿಳಿಸಲಾಗಿದೆ. ಇದರಿಂದ ಗಾಬರಿಗೊಂಡ ಸಲ್ಮಾನ್ ಕುಟುಂಬದ ಸದಸ್ಯರು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದಾರೆ. ಇದರ ನಡುವೆ, ಜೈಲು ಮುಂದೆ ಜನರು ಸೇರಿ ಗಲಾಟೆ ಕೂಡ ಮಾಡಿದ್ದಾರೆ. ತುಂಗಾನಗರ ಪೊಲೀಸರು ಜೈಲಿಗೆ ಧಾವಿಸಿ ಅಲ್ಲಿ ಜಮಾಯಿಸಿದ್ದ ಜನರನ್ನು ವಶಕ್ಕೆ ಪಡೆದಿದ್ದಾರೆ.

READ | ಗಾಂಧಿ ಬಜಾರಿನಲ್ಲಿ ನಕಲಿ ಕೊಬ್ಬರಿ ಎಣ್ಣೆ ಮಾರಾಟ, ಪಕ್ಕಾ ಮಾಹಿತಿ ಮೇರೆಗೆ ಖಾಕಿ ರೇಡ್

ಉದ್ದೇಶಪೂರ್ವಕವಾಗಿಯೇ ಈ ರೀತಿಯ ಪುಕಾರು‌ ಹಬ್ಬಿಸಿ ಗೊಂದಲವನ್ನು ಸೃಷ್ಟಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಲ್ಮಾನ್ ಮೇಲೆ ಪೊಲೀಸ್‌ ಠಾಣೆಯಲ್ಲಿ ಕೊಲೆ, ಹಾಫ್‌ ಮರ್ಡರ್, ಗಾಂಜಾ ಮಾರಾಟದ ಪ್ರಕರಣಗಳು ದಾಖಲಾಗಿವೆ. ಹಂದಿ‌ ಅಣ್ಣಿ ಸಹೋದರನ ಕೊಲೆ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ. 

https://www.suddikanaja.com/2021/05/26/prisoner-deid-due-to-heart-attack/

error: Content is protected !!