ಗಾಂಧಿ ಬಜಾರ್ ನಲ್ಲಿ ದಿಢೀರ್ ದಾಳಿ, ಫೀಲ್ಡಿಗಿಳಿದ ಕಮಿಷ್ನರ್, ಕಾರಣವೇನು‌ ಗೊತ್ತಾ?

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ನಗರದ ನೆಹರೂ ರಸ್ತೆ ಹಾಗೂ ಗಾಂಧಿ ಬಜಾರ್ ನಲ್ಲಿ‌ ಗುರುವಾರ ಸಂಜೆ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ ನೇತೃತ್ವದಲ್ಲಿ ಅಧಿಕಾರಿಗಳ‌ ತಂಡ ದಾಳಿ‌ ನಡೆಸಿದೆ.

READ | ಮಗುವಿಗೆ ಬೋನ್ ಕ್ಯಾನ್ಸರ್, ಪಡಿತರಕ್ಕೆ ಹೆಸರು ಸೇರಿಸಲು ಮನವಿ

ಅನ್ ಲಾಕ್ ಬಳಿಕ ಸಾರ್ವಜನಿಕರು ಅಗತ್ಯ ವಸ್ತುಗಳ‌ ಖರೀದಿಗೆ ಮುಗಿಬಿದ್ದಿದ್ದು ಕೋವಿಡ್ ಕಾರ್ಯಸೂಚಿಯನ್ನು ಸಂಪೂರ್ಣ ಮರೆತು ವ್ಯವಹರಿಸುತಿದ್ದು, ಇಂತಹವರಿಗೆ ಆಯುಕ್ತರು‌ ಶಾಕ್‌ ನೀಡಿದ್ದಾರೆ.
ಕಿಕ್ಕಿರಿದು ತುಂಬಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ‌ ಅವರಲ್ಲಿ ಜಾಗೃತಿ ಮೂಡಿಸಲಾಯಿತು. ಕಡ್ಡಾಯವಾಗಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಬೇಕು ಎಂದು ಸಾರ್ವಜನಿಕರಿಗೆ ಹಾಗೂ ಅಂಗಡಿ ಮಾಲೀಕರಿಗೆ ತಿಳಿವಳಿಕೆ ಹೇಳಲಾಯಿತು. ನಂತರ, ದಂಡ ವಿಧಿಸಲಾಯಿತು.

error: Content is protected !!