ಶಿವಮೊಗ್ಗದಲ್ಲಿ ಕೈಕೊಟ್ಟಿದ್ದ ಮುಂಗಾರು ಮತ್ತೆ ಪ್ರತ್ಯಕ್ಷ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜೂನ್ ಮೊದಲ ವಾರದಲ್ಲಿ ಅಬ್ಬರಿಸಿದ್ದ ಮಳೆರಾಯ ನಂತರ ಮೌನಕ್ಕೆ ಜಾರಿದ್ದ. ಮುಂಗಾರು ನಂಬಿ ಬಿತ್ತನೆ ಮಾಡಿದ್ದ ರೈತರು ಮಳೆಯ ನಿರೀಕ್ಷೆಯಲ್ಲಿದ್ದರು. ಈಗ ಮತ್ತೆ ವರ್ಷಧಾರೆ ಆರಂಭವಾಗಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಲೆನಾಡಿನ ಹಲವೆಡೆ ಜಿಟಿ ಮಳೆಯಾಗಿದೆ. ರೈತರ ಮೊಗದಲ್ಲಿ ಮತ್ತೊಮ್ಮೆ ನಗೆ ಮೂಡಿದೆ. ಶಿವಮೊಗ್ಗ ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ 7.6 ಎಂಎಂ ಮಳೆಯಾಗಿದೆ.

ಜೋಗದ ಪರಿಸರದಲ್ಲೂ ಮಳೆಯಾಗಿದ್ದು, ಜಲಪಾತಕ್ಕೆ ಜೀವಕಳೆ ಬಂದಿದೆ. ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಆಗಮಿಸುತ್ತಿದ್ದಾರೆ.

error: Content is protected !!