BS Yediyurappa | ಸಿಎಂ ಸ್ಥಾನಕ್ಕೆ ರಾಜೀನಾಮೆ‌ ನೀಡಿದ್ದರ ಬಗ್ಗೆ ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?

 

 

ಸುದ್ದಿ ಕಣಜ.ಕಾಂ | TALUK | POLITICS
ಶಿವಮೊಗ್ಗ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಬಗ್ಗೆ ತವರು ಕ್ಚೇತ್ರದಲ್ಲಿ ಶಾಸಕ, ಬಿಜೆಪಿ ವರಿಷ್ಠ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಸ್ಮರಿಸಿದ್ದಾರೆ.

bsy shikaripura 2ಶಿಕಾರಿಪುರದ ಕುಮದ್ವತಿ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
‘ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಯಾರೊಬ್ಬರೂ ನನಗೆ ಒತ್ತಡ ಹೇರಿಲ್ಲ. ನನ್ನ ಸ್ವ ಇಚ್ಛೆಯಿಂದ ಸ್ಥಾನ ತ್ಯಜಿಸಿದ್ದೇನೆ. ಇನ್ನೊಬ್ಬರು ರಾಜಕೀಯವಾಗಿ ಬೆಳೆಯಲಿ, ಅವಕಾಶ ಸಿಗಲಿ ಎಂಬ ಉದ್ದೇಶಕ್ಕಾಗಿ ಈ ನಿರ್ಧಾರ ಮಾಡಿದ್ದೆ’ ಎಂದು ಹೇಳಿದರು.

https://www.suddikanaja.com/2021/08/25/bs-yediyurappa-purchased-new-car/

ಭಾವನಾತ್ಮಕಗೊಳ್ಳಲು ಕ್ಷೇತ್ರದವರ ಪ್ರೀತಿಯೇ ಕಾರಣ
ಸರ್ಕಾರದ ಎರಡು ವರ್ಷದ ಸಾಧನೆ ಸಮಾರಂಭದಲ್ಲಿ ಭಾಷಣ ವೇಳೆ ಭಾವನಾತ್ಮಕಗೊಳ್ಳಲು ಕ್ಷೇತ್ರದವರ ಪ್ರೀತಿಯೇ ಕಾರಣ. ಶಿಕಾರಿಪುರದ ಜನರ ಹೋರಾಟ ನೆನಪಿಸಿಕೊಂಡು ಆವೇಶಗೊಂಡಿದ್ದೆ ಎಂದು ಸ್ಮರಿಸಿದರು.
ಮಾಡಿದ ಸಂಕಲ್ಪದಂತೆ ನಡೆದುಕೊಂಡಿದ್ದೇನೆ
ಪಕ್ಷದಲ್ಲಿರುವ ಇತರರಿಗೂ ಅವಕಾಶ ಸಿಗಬೇಕು ಎಂಬ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಮುಂಚೆಯೇ ಮಾಡಿರುವ ಸಂಕಲ್ಪದಂತೆ ಭಾಷಣದ ನಂತರ ರಾಜೀನಾಮೆ‌ ನೀಡಿ ಸಿಹಿ ಊಟ ಹಾಕಿಸಿದ್ದೇನೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

https://www.suddikanaja.com/2021/05/22/pdo-suspended-in-hosanagara/

error: Content is protected !!