ರಾಜ್ಯದಲ್ಲಿ ಡಿಸಿಎಂ ಹುದ್ದೆಗೆ ಕೊಕ್, ಸಂಪುಟದಲ್ಲಿದ್ದಾರೆ 29 ಜನ, ಯಾವ ಸಮುದಾಯದವರಿಗೆ ಎಷ್ಟು ಸ್ಥಾನ?

 

 

ಸುದ್ದಿ ಕಣಜ.ಕಾಂ | KARNATAKA | POLITICS
ಬೆಂಗಳೂರು: ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದೇ ಮೂವರು ಡಿಸಿಎಂಗಳ ಹೆಸರುಗಳನ್ನು ಘೋಷಿಸಲಾಗಿತ್ತು. ಆದರೆ, ರಾಜಕೀಯ ಬೆಳವಣಿಗೆಯೊಂದರಲ್ಲಿ ಡಿಸಿಎಂ ಸ್ಥಾನಕ್ಕೆ ಕೊಕ್ ನೀಡಲಾಗಿದೆ.
ಬೆಂಗಳೂರಿನ ವಿಧಾನಸೌಧಲ್ಲಿ ಬುಧವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಇದನ್ನು ಘೋಷಿಸಿದರು.

ಸಂಪುಟದ ಮೇಲೆ ಯಡಿಯೂರಪ್ಪ ಅವರ ಆಶೀರ್ವಾದವೂ ಇದೆ. ಯಾವುದೇ ಗೊಂದಲಗಳು ಇಲ್ಲ. ಹೈಕಮಾಂಡ್ ಮಾರ್ಗದರ್ಶನದಲ್ಲಿ ಜನಪರ ಆಡಳಿತ ನೀಡಲಾಗುವುದು. ಚುನಾವಣೆಯನ್ನು ದೃಷ್ಟಿಕೋನದಲ್ಲಿಟ್ಟುಕೊಂಡು ಸಂಪುಟ ರಚಿಸಲಾಗಿದೆ.
ಬಸವರಾಜ್ ಬೊಮ್ಮಾಯಿ, ಸಿಎಂ

ಹೈಕಮಾಂಡ್ ನಿರ್ಧಾರದಂತೆ ಈ ಸಲ ಯಾರಿಗೂ ಡಿಸಿಎಂ ಸ್ಥಾನ ನೀಡಿಲ್ಲ. ಜತೆಗೆ, ಸಚಿವ ಸ್ಥಾನಕ್ಕಾಗಿ 29 ಜನರ ಹೆಸರುಗಳನ್ನು ರಾಜ್ಯಪಾಲರಿಗೆ ನೀಡಲಾಗಿದೆ. ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದರು.
ಯಾವ ಸಮುದಾಯಕ್ಕೆ ಎಷ್ಟು ಮಂತ್ರಿಗಿರಿ?
8 ಜನ ಲಿಂಗಾಯತರು, 7 ಒಕ್ಕಲಿಗ, 7 ಒಬಿಸಿ, 3 ಎಸ್ಸಿ, 1 ಎಸ್‍ಟಿ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.

https://www.suddikanaja.com/2021/07/29/bjp-used-lord-krishna-strategy-in-karnataka-politics-said-ks-eshwarappa/

error: Content is protected !!