ಡ್ರಾ ಮಾಡದಿದ್ದರೂ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ಹಣ ಮಂಗಮಾಯ!

 

 

ಸುದ್ದಿ ಕಣಜ.ಕಾಂ | DISTRICT | CYBER CRIME
ಶಿವಮೊಗ್ಗ: ಹಣ ಡ್ರಾ ಮಾಡದಿದ್ದರೂ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂಪಾಯಿ ಮಾಯವಾಗಿದೆ.
ಗೋಪಿಶೆಟ್ಟಿಕೊಪ್ಪದ ಮಹಿಳೆಯೊಬ್ಬರ ಖಾತೆಯಿಂದ 1,10,014 ರೂಪಾಯಿ ಲಪಟಾಯಿಸಲಾಗಿದ್ದು, ಮಹಿಳೆಯು ಶಿವಮೊಗ್ಗ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

READ | ಪ್ರವಾಸಿಗರ ಸೋಗಿನಲ್ಲಿ ಬಂದ ಡಿಎಸ್.ಪಿ ತಂಡ, ಜೋಗದ 7 ಭದ್ರಾ ಸಿಬ್ಬಂದಿ ಮೇಲೆ ದಾಖಲಾಯ್ತು ಎಫ್.ಐ.ಆರ್., ಕಾರಣವೇನು ಗೊತ್ತಾ?

ಮಿಸ್ಟ್ರಿಯಾಗೇ ಉಳಿದ ಹಣ ಡ್ರಾ
ಆಗಸ್ಟ್ 18ರಂದು ಬ್ಯಾಂಕಿಗೆ ಹೋಗಿ ಪಾಸ್ ಬುಕ್ ಎಂಟ್ರಿ ಮಾಡಿಸಿದಾಗ ಖಾತೆಯಿಂದ ಹಣ ಮಾಯವಾಗಿರುವುದು ಗಮನಕ್ಕೆ ಬಂದಿದೆ. ತಬ್ಬಿಬ್ಬಾದ ಮಹಿಳೆ ಗುರುವಾರ ದೂರು ನೀಡಿದ್ದಾರೆ.
ಖಾತೆಯು ಮೈಸೂರಿನಲ್ಲಿದ್ದು, ಪತಿಯ ವರ್ಗಾವಣೆ ಹಿನ್ನೆಲೆ ಶಿವಮೊಗ್ಗದ ವಿನೋಬನಗರ ಶಾಖೆಗೆ ವರ್ಗಾವಣೆ ಮಾಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ವರ್ಗಾವಣೆಯೂ ಆಗಿದೆ. ತದನಂತರ, ಪಾಸ್ ಬುಕ್ ಎಂಟ್ರಿಗಾಗಿ ಹೋದಾಗ 1,10,014 ಹಣ ನಾಪತ್ತೆಯಾಗಿವೆ.

error: Content is protected !!