ಭದ್ರಾವತಿಯಲ್ಲಿ ಲಕ್ಷಾಂತರ ಮೌಲ್ಯದ ಗಾಂಜಾ ವಶಕ್ಕೆ ಪಡೆದ ಪೊಲೀಸರು, ಹೇಗೆ ಸಾಗಿಸಲಾಗುತಿತ್ತು?

 

 

ಸುದ್ದಿ ಕಣಜ.ಕಾಂ | TALUK | CRIME
ಭದ್ರಾವತಿ: ಕಾರಿನಲ್ಲಿ ಸಾಗಿಸುತ್ತಿದ್ದ ಒಣ ಗಾಂಜಾ ಸಾಗಿಸುತಿದ್ದ ಗ್ಯಾಂಗ್ ವೊಂದನ್ನು ಬಂಧಿಸಿ, ಅವರಿಂದ ಲಕ್ಷಾಂತರ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ.

https://www.suddikanaja.com/2021/04/08/person-arrested-in-ganja-case/

ಕೂಲಿ ಬ್ಲಾಕ್‌ ಶೆಡ್‌ ನ ಡ್ಯಾನಿಯಲ್‌(22), ಆದಿಲ್‌ ಭಾಷಾ (26) ಹಾಗೂ ನ್ಯೂ ಕಾಲೊನಿ‌ಯ ಚರಣ್(19) ಎಂಬುವವರನ್ನು ಬಂಧಿಸಲಾಗಿದೆ.

ಪತ್ತೆಯಾದ ಗಾಂಜಾ ಎಷ್ಟು, ಸಿಕ್ಕಿದ್ದು ಏನೇನು?

ಪೇಪರ್‌ ಟೌನ್‌ ನಿಂದ ನ್ಯೂಟೌನ್‌ ಕಡೆ‌‌ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರನ್ನು ಪರಿಶೀಲಿಸಿದ್ದಾರೆ. ಆಗ ಕಾರಿನಲ್ಲಿ ಅಂದಾಜು 1.30 ಲಕ್ಷ ರೂಪಾಯಿ ಮೌಲ್ಯದ ಒಟ್ಟು 11 ಕೆಜಿ 440 ಗ್ರಾಂ ಒಣ ಗಾಂಜಾ ಇತ್ತು. ಅದನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕೃತ್ಯಕ್ಕೆ ಉಪಯೋಗಿಸಿದ ಫೋರ್ಡ್‌ ಫಿಯೆಸ್ಟಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಭದ್ರಾವತಿ ನ್ಯೂ ಟೌನ್‌ ಪೊಲೀಸ್‌ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎನ್‌.ಡಿ.ಪಿ.ಎಸ್‌. ಕಾಯ್ದೆ ಅನ್ವಯ‌ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

https://www.suddikanaja.com/2021/07/16/ganja-sale-accused-arrested/

error: Content is protected !!