ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಸರ್ಕಾರ ಬಂಪರ್ ಕೊಡುಗೆ, ಯಾರಿಗೆಷ್ಟು ಸ್ಕಾಲರ್‍ಶಿಪ್, ಇಲ್ಲಿದೆ ಪೂರ್ಣ ವಿವರ

 

 

ಸುದ್ದಿ ಕಣಜ.ಕಾಂ | KARNATAKA | EDUCATION
ಬೆಂಗಳೂರು: ರೈತರ ಮಕ್ಕಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಬಂಪರ್ ಕೊಡುಗೆ ನೀಡಿದ್ದು, ಶನಿವಾರ ಈ ಸಂಬಂಧ ಹೊಸ ಶಿಷ್ಯವೇತನ ಯೋಜನೆ ಜಾರಿಗೆ ಆದೇಶ ಹೊರಡಿಸಲಾಗಿದೆ.
ಜುಲೈ 28ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರೈತರ ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಸ್ಕಾಲರ್ ಶಿಪ್ ಯೋಜನೆಯ ಬಗ್ಗೆ ಚರ್ಚಿಸಲಾಗಿದ್ದು, ಅದರಂತೆ, ಹೊಸ ಶಿಷ್ಯವೇತನ ಯೋಜನೆ ಜಾರಿಗೆ ನಿರ್ಧರಿಸಲಾಗಿತ್ತು.

Farmer order
ಡಿಬಿಟಿ ಮೂಲಕ ಶಿಷ್ಯವೇತನದ ಹಣ ಸಂದಾಯ
10ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ ರಾಜ್ಯದ ಯಾವುದೇ ಭಾಗದಲ್ಲಿರುವ, ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಗಳವರೆಗೆ ಪ್ರವೇಶವನ್ನು ಪಡೆದಿರುವ ರಾಜ್ಯದ ರೈತರ ಮಕ್ಕಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಪದ್ಧತಿ ಮೂಲಕ ಹಣ ವರ್ಗಾವಣೆ ಮಾಡಲಾಗುವುದು.
2021-22ನೇ ಆಥಿರ್ಕ ವರ್ಷದ ಸಾಲಿನಿಂದ ಜಾರಿಗೆ ಬರುವಂತೆ ಶಿಷ್ಯವೇತನದ ಹಣವನ್ನು ವಾರ್ಷಿಕ ಶಿಷ್ಯವೇತನ ರೂಪದಲ್ಲಿ ಪಾವತಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರದಿಂದ ಮಂಜೂರು ಮಾಡಲಾಗುವ ಶೀಷ್ಯವೇತನ (ರೂ.ಗಳಲ್ಲಿ)
ಕೋರ್ಸ್ ಪುರುಷರು ಮಹಿಳೆಯರು, ಅನ್ಯಲಿಂಗದವರು
ಪದವಿಯ ಮುಂಚೆ ಪಿಯುಸಿ, ಐಟಿಐ, ಡಿಪ್ಲೋಮಾ  2500 3000
ಎಲ್ಲ ಬಿಎ, ಬಿಎಸ್ಸಿ, ಬಿಕಾಂ ಇತ್ಯಾದಿ (ಎಂಬಿಬಿಎಸ್, ಬಿಇ, ಬಿಟೆಕ್, ವೃತ್ತಿಪರ ಕೋರ್ಸ್ ಹೊರತುಪಡಿಸಿ) 5000 5500
ಎಲ್.ಎಲ್.ಬಿ., ಪ್ಯಾರ ಮೆಡಿಕಲ್, ಬಿಫಾರ್ಮ್, ನರ್ಸಿಂಗ್, ಇತ್ಯಾದಿ, ವೃತ್ತಿಪರ ಕೋರ್ಸ್‍ಗಳು 7500 8000
ಎಂಬಿಬಿಎಸ್, ಬಿಇ, ಬಿಟೆಕ್, ಎಲ್ಲ ಸ್ನಾತಕೋತ್ತರ ಕೋರ್ಸ್ 10000 11000

https://www.suddikanaja.com/2021/06/18/ugc-green-signal-for-online-course-start-in-kuvempu-university/

error: Content is protected !!