
ಸುದ್ದಿ ಕಣಜ.ಕಾಂ | POLITICAL NEWS
ಶಿವಮೊಗ್ಗ: ಶಾಸಕ ಕೆ.ಎಸ್.ಈಶ್ವರಪ್ಪ (KS Eshwarappa) ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yadiyurappa) ಅವರನ್ನು ನೋಡಿ ಕಲಿಯಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ (HS Sundaresh) ಅಭಿಪ್ರಾಯಪಟ್ಟರು.
READ | ಶಿವಮೊಗ್ಗದ 22 ಕೇಂದ್ರಗಳಲ್ಲಿ ನಡೆಯಲಿದೆ ಟಿಇಟಿ ಪರೀಕ್ಷೆ, ಬೆಳಗ್ಗೆಯಿಂದ ಸಂಜೆಯವರೆಗೆ ನಿಷೇಧಾಜ್ಞೆ
ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕೂಡ ಬಿಜೆಪಿಯವರೇ ಆಗಿದ್ದಾರೆ. ಆದರೆ, ಧರ್ಮಗಳ ನಡುವೆ ಅವರೆಂದೂ ಶಾಂತಿ ಕದಡುವ ಮಾತುಗಳನ್ನು ಆಡುವುದಿಲ್ಲ. ಅಭಿವೃದ್ಧಿಗೋಸ್ಕರ ಶ್ರಮಿಸುತ್ತಾರೆ. ಈಶ್ವರಪ್ಪ ಧರ್ಮವನ್ನು ಮೈಮೇಲೆ ಹೊತ್ತುಕೊಂಡಂತೆ ಅಧಿಕಾರಕ್ಕಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಮಲ್ಲಿಕಾರ್ಜುನ್ ಖರ್ಗೆ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನವೆಂಬರ್ 6ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ. ಅದರಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಸುಮಾರು 15 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ.
| ಸೈಯ್ಯದ್ ಅಹ್ಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಎಚ್.ಎಸ್.ಸುಂದರೇಶ್ ಮಾಡಿದ ಆರೋಪಗಳಿವು
- ಹರ್ಷನ ಕೊಲೆ ರಾಜಕಾರಣಕ್ಕೆ ಬಳಕೆ | ಈಶ್ವರಪ್ಪ ಅವರು ಕಳೆದ 25 ವರ್ಷಗಳ ರಾಜಕೀಯ ಬದುಕಿನಲ್ಲಿ ಧರ್ಮಗಳ ನಡುವೆ ಸಂಘರ್ಷ ಹುಟ್ಟು ಹಾಕುವುದು ಬಿಟ್ಟರೆ ಇನ್ನೇನೂ ಮಾಡಿಲ್ಲ. ಹರ್ಷನ ಕೊಲೆಯನ್ನೂ ರಾಜಕಾರಣಕ್ಕೋಸ್ಕರ ಬಳಸಿಕೊಳ್ಳುತ್ತಿದ್ದಾರೆ.
- ಬಿಜೆಪಿ- ಬ್ರಿಟಿಷ್ ಆಡಳಿತ ನಡುವೆ ವ್ಯತ್ಯಾಸವಿಲ್ಲ | ಬಿಜೆಪಿಯವರ ಹಾಗೂ ಬ್ರಿಟಿಷರ ಆಡಳಿತದ ನಡುವೆ ವ್ಯತ್ಯಾಸವೇನೂ ಇಲ್ಲ. ಬ್ರಿಟಿಷರು ದೇಶವನ್ನು ಕೊಳ್ಳೆ ಹೊಡೆದರು. ಬಿಜೆಪಿಯವರು ಧರ್ಮ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದು ಅಧರ್ಮದ ದಾರಿ ತುಳಿಯುತ್ತಿದ್ದಾರೆ.
- ಸಾವರ್ಕರ್ ಈಗೇಕೆ ನೆನಪಾದರು? | ಬಿಜೆಪಿ ಪಕ್ಷದವರಿಗೆ ಈಗೇಕೆ ಸಾವರ್ಕರ್ ನೆನಪಾದರು? ಇಷ್ಟು ದಿನ ಸಾಮಾನ್ಯ ವ್ಯಕ್ತಿಯಾಗಿದ್ದ ಸಾವರ್ಕರ್ ಅವರು ಅದೇಕೆ ವಿಜೃಂಭಣೆಗೆ ಪಾತ್ರರಾದರು? ಇತ್ತೀಚೆಗೆ ಸಾವರ್ಕರ್ ಅವರ ಮೊಮ್ಮಗನನ್ನು ಶಿವಮೊಗ್ಗಕ್ಕೆ ಕರೆಸಲಾಯಿತು? ಈಶ್ವರಪ್ಪ ಅವರಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪ್ರೀತಿ ಇದ್ದರೆ, ಶಿಕಾರಿಪುರ ತಾಲೂಕಿನ ಈಸೂರಿಗೆ ಹೋಗಲಿ.
READ | ಆಟೋ ಚಾಲಕರಿಗೆ ಪೊಲೀಸರ ಖಡಕ್ ವಾರ್ನಿಂಗ್, ಎಸ್ಪಿ ನೀಡಿದ 7 ಸೂಚನೆಗಳಿವು
ಪ್ರಮುಖರಾದ ರೇಖಾ ರಂಗನಾಥ್, ಸಿ.ಎಸ್.ಚಂದ್ರಭೂಪಾಲ್, ಚಂದ್ರಶೇಖರ್, ಮುಜೀಬ್, ಚಂದನ್, ಖಲೀಂಪಾಷಾ, ಎನ್.ಡಿ. ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.