ಸುದ್ದಿ ಕಣಜ.ಕಾಂ | TALUK | ONAM CELEBRATION
ಸಾಗರ: ಶ್ರೀನಗರದ ಬಡಾವಣೆಯಲ್ಲಿ ಪತ್ರಕರ್ತ ಎಂ.ಜಿ. ರಾಘವನ್ ಅವರ ಮನೆಯಲ್ಲಿ ಓಣಂ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಹೇಗಿತ್ತು ಓಣಂ ಆಚರಣೆ, ಹೂವಿನ ಅಲಂಕಾರ ರಂಗೋಲಿಯ ಅಲಂಕಾರ, ಯುವತಿಯರೇನು ಹೇಳುತ್ತಾರೆ. ಮಾಹಿತಿಗಾಗಿ ವಿಡಿಯೋ ವೀಕ್ಷಿಸಿ (VIDEO REPORT)
ಐಶ್ವರ್ಯ ಮತ್ತು ಸಮೃದ್ಧಿಯ ಹಬ್ಬವಾದ 9ನೇ ದಿನವನ್ನು ತಿರು ಓಣಂ ಎಂದು ಕರೆಯಲಾಗುತ್ತದೆ. ಓಣಂ ಹಬ್ಬದಲ್ಲಿ ಮಹಿಳೆಯರು ಹೂವಿನಿಂದಲೇ ರಂಗೋಲಿ ಬಿಡಿಸಿ, ಸಾಂಪ್ರದಾಯಿಕ ಉಡುಗೆ ತೊಟ್ಟು, ಕೇರಳದ ಸಿಹಿ ಭಕ್ಷ್ಯಗಳನ್ನು ಮಾಡುತ್ತಾರೆ.
ಓಣಂ ಹಬ್ಬದಲ್ಲಿ ಮಹಿಳೆಯರು ವಿವಿಧ ಬಣ್ಣದ ಹೂವುಗಳನ್ನು ತಂದು, ಮನೆಯ ಮುಂದೆ ಪೂಕಳಂ ಎನ್ನುವ ಸುಂದರ ಹೂವಿನ ರಂಗೋಲಿಯನ್ನು ಹಾಕುತ್ತಾರೆ. ಸಾಂಪ್ರದಾಯಿಕ ಹಾಡುಗಳನ್ನು ಹಾಡಲಾಗುತ್ತದೆ. ಓಣಂ ಹಬ್ಬದಲ್ಲಿ ಪೂಕಳಂ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಓಣಂ ಹಬ್ಬದ ಪ್ರಯುಕ್ತ ಮಹಿಳೆಯರು ಕೇರಳದ ಸಾಂಪ್ರದಾಯಿಕ ಬಿಳಿ ಮತ್ತು ಚಿನ್ನದ ಬಣ್ಣದ ಅಂಚಿರುವ ಸೀರೆಯನ್ನುಟ್ಟು ಸಂಭ್ರಮಿಸುತ್ತಾರೆ.
ತರಹೇವಾರಿ ಖಾದ್ಯ
ಓಣಂ ಹಬ್ಬದಲ್ಲಿ ಊಟ ಕೂಡ ಬಹಳ ವಿಶೇಷವಾಗಿರುತ್ತದೆ. ಓಣ ಸಡ್ಯ ಎಂಬುದೂ ತಿರು-ಓಣಂ ದಿನ ಮಾಡುವ ವಿಶೇಷ ಊಟವಾಗಿದೆ. ಹೊಸ ಬೆಳೆಗಳನ್ನು ತಂದು ಈ ದಿನ ಆಹಾರವನ್ನು ತಯಾರಿಸಲಾಗುತ್ತದೆ. ಈ ಊಟವು ರಾಜ ಮನೆತನದ ವೈಭೋಗದ ಊಟವಾಗಿದ್ದು, ಮೂರು ಬಗೆಯ ಪಾಯಸ ಸೇರಿದಂತೆ ಇನ್ನೂ ನಾನಾ ರೀತಿಯ ಸಿಹಿ ತಿಂಡಿ, ಕೇರಳದ ಸಾಂಪ್ರದಾಯ.
ಈ ಬಾರಿ ಕೊರೊನಾ ಸಾಂಕ್ರಾಮಿಕ ರೋಗ ಇರುವುದರಿಂದ ಅದ್ಧೂರಿಯಾಗಿ ಆಚರಿಸಲು ಆಗುತ್ತಿಲ್ಲ ಎನ್ನುತ್ತಾರೆ ಸಾಗರದ ಶ್ರೀನಗರ ನಿವಾಸಿ ಶರಣ್ಯ ಆರ್.ನಾಯರ್.
ವರದಿ- ಸೂರಜ್ ನಾಯರ್
ಶಿವಮೊಗ್ಗದಲ್ಲಿ ಅನಾವರಣಗೊಳ್ಳಲಿರುವ ಬಸವೇಶ್ವರ ಪುತ್ಥಳಿ ಅಡಿ ವಿಶೇಷ ಕಲ್ಲು, ಹೇಗಿರಲಿದೆ ವಿನ್ಯಾಸ?