ಜೋಗ ಜಲಪಾತ ಓಪನ್, ಆರ್.ಟಿ.ಪಿ.ಸಿ.ಆರ್. ವರದಿ ಇದ್ದರಷ್ಟೇ ಪ್ರವೇಶಕ್ಕೆ ಅವಕಾಶ, ಎಲ್ಲೆಲ್ಲಿವೆ ಚೆಕ್ ಪೋಸ್ಟ್, ಹೇಗಿದೆ ಈಗಿನ ಸ್ಥಿತಿ?

 

 

ಸುದ್ದಿ ಕಣಜ.ಕಾಂ | SAGARA | JOGFALLS
ಶಿವಮೊಗ್ಗ: ಜೋಗ ಜಲಪಾತಕ್ಕೆ ಬರುವವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿ ಇದ್ದರಷ್ಟೇ ಅಂತಹವರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.

https://www.suddikanaja.com/2021/02/03/chain-snatching-pulsar-gang-re-active-in-shivamogga/

ಜೋಗ ಜಲಪಾತ ವಾರಾಂತ್ಯಗಳಲ್ಲಿ ಬಂದ್ ಇರುವುದಾಗಿ ಸುಳ್ಳು ಸುದ್ದಿ ಹರಡಿದ್ದು, ಅದನ್ನು ನಂಬುವ ಅಗತ್ಯವಿಲ್ಲ. ಆದರೆ, ಈ ಹಿಂದೆ ಜಿಲ್ಲಾಡಳಿತ ಹೊರಡಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಿನಿಂದ ಪಾಲನೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲೆಲ್ಲಿವೆ ಚೆಕ್ ಪೋಸ್ಟ್?
ಜೋಗಕ್ಕೆ ನೆಗೆಟಿವ್ ವರದಿ ಇಲ್ಲದೇ ಬರುವವರನ್ನು ಒಳಗೆ ಬಿಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದಂತೇ ಎಚ್ಚರಗೊಂಡ ಆಡಳಿತ ವರ್ಗ ಜೋಗಕ್ಕೆ ಹೋಗುವ ಮಾರ್ಗದಲ್ಲಿ ಮೂರು ಕಡೆ ಚೆಕ್ ಪೋಸ್ಟ್ ಸ್ಥಾಪಿಸಿದೆ. ಚೂರಿಕಟ್ಟೆ, ಸೀತಾಕಟ್ಟೆ ಬ್ರಿಜ್, ಜೋಗದ ಪ್ರವೇಶ ದ್ವಾರದಲ್ಲಿ ಪೊಲೀಸರ ಗಸ್ತು ಇದೆ. ಇಲ್ಲಿ ವರದಿ ನೀಡಿಯೇ ಮುಂದೆ ಹೋಗಬೇಕು. ಆರ್.ಟಿ.ಪಿ.ಸಿ.ಆರ್. ವರದಿ ಇಲ್ಲದೇ ಬರುತ್ತಿರುವ ಸಾಕಷ್ಟು ಪ್ರವಾಸಿಗರನ್ನು ವಾಪಸ್ ಕಳುಹಿಸಲಾಗುತ್ತಿದೆ. ಭಾನುವಾರ ಬೆಳಗ್ಗೆಯೇ ಸಾಕಷ್ಟು ಜನ ಬಂದು ವಾಪಸ್ ತೆರಳಿದ್ದಾರೆ.

ಹೊರ ರಾಜ್ಯದವರ ಸಂಖ್ಯೆಯೇ ಹೆಚ್ಚು

ಪ್ರತಿ ವಾರಾಂತ್ಯಗಳಲ್ಲಿ ಜೊಗ ಜಲಪಾತ ವೀಕ್ಷಿಸುವುದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ, ಈ ವಾರ ಬೆಳಗ್ಗೆಯಿಂದ ಜನರ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪ್ರತಿ ವಾರಕ್ಕೆ ಹೋಲಿಸಿದ್ದರೆ ಶೇ.15ರಷ್ಟು ಪ್ರವಾಸಿಗರು ಮಾತ್ರ ಬಂದಿದ್ದಾರೆ. ಅದರಲ್ಲಿ ಹೆಚ್ಚು ಹೊರ ರಾಜ್ಯದವರೇ ಆಗಿದ್ದಾರೆ. ಬೆಂಗಳೂರಿನಿಂದ ಹೆಚ್ಚು ಜನ ಬರುತ್ತಿದ್ದರು. ಆದರೆ, ಆರ್.ಟಿ.ಪಿ.ಸಿ.ಆರ್. ವರದಿ ಲಭ್ಯವಾಗದೆ ಅವರ ಸಂಖ್ಯೆ ಇಳಿಮುಖವಾಗಿದೆ.

https://www.suddikanaja.com/2021/08/06/tourist-going-back-those-who-dont-carry-rtpcr-test/

error: Content is protected !!