ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ವ್ಯವಸ್ಥಾಪಕ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ 1.78 ಲಕ್ಷ ರೂಪಾಯಿ ದೋಖಾ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮಾಲ್ ವೊಂದರ ಶೂ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಲೋಕೇಶ್ ಎಂಬಾತನೇ ಕಂಪೆನಿಯ ಹಣ ದುರುಪಯೋಗ ಮಾಡಿಕೊಂಡಿರುವುದಾಗಿ ದೂರು ದಾಖಲಾಗಿದೆ.
ಲೋಕೇಶ್ ಇನ್ನೊಂದು ಕಡೆ ವರ್ಗಾವಣೆ ಆಗಿದ್ದಾರೆ. ಆ ಜಾಗಕ್ಕೆ ಮತ್ತೊಬ್ಬ ಮ್ಯಾನೇಜರ್ ಬಂದಿದ್ದು, ಆಡಿಟ್ ಮಾಡುವಾಗ ಹಣ ದುರುಪಯೋಗ ವಿಚಾರ ಗೊತ್ತಾಗಿದೆ. ಲೋಕೇಶ್ ಎಂಬುವವರ ವಿರುದ್ಧ ದೊಡ್ಡಪೇಟೆ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.