ಪಿಯುಸಿಯಲ್ಲಿ ರ‌್ಯಾಂಕ್ ಪಡೆದ ವಿದ್ಯಾರ್ಥಿ ನೀಟ್ ಪರೀಕ್ಷೆಗೆ ಭಯಪಟ್ಟು ಆತ್ಮಹತ್ಯೆ

 

 

ಸುದ್ದಿ ಕಣಜ.ಕಾಂ | TALUK | CRIME
ಸೊರಬ: ಕಳೆದ ವರ್ಷ ಪಿಯುಸಿ ದ್ವಿತೀಯ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ್ದ ವಿದ್ಯಾರ್ಥಿಯೊಬ್ಬ ನೀಟ್ ಪರೀಕ್ಷೆಯ ಭಯದಿಂದ ಮನೆಯ ಹಿತ್ತಲಿನಲ್ಲಿ ಭಾನುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

https://www.suddikanaja.com/2021/08/08/farmer-committed-suicide/

ತಾಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಕೃಷ್ಣರಾವ್ ಅವರ ಪುತ್ರ ಕೆ.ಚಿನ್ಮಯ್ (18) ಆತ್ಮಹತ್ಯೆಗೆ ಶರಣಾದ ಯುವಕ.
ಕಳೆದ ವರ್ಷ ಪಿಯುಸಿ ದ್ವಿತೀಯ ವರ್ಷದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದ. ಆದರೆ, ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಈ ವರ್ಷವೂ ನೀಟ್ ಗಾಗಿ ತಯಾರಿ ಮಾಡುತಿದ್ದ. ಆದರೆ, ಪರೀಕ್ಷೆಗೆ ಭಯಪಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

READ | ಭದ್ರಾವತಿಗೆ ತರುತ್ತಿದ್ದ ಲಕ್ಷಾಂತರ ಮೌಲ್ಯದ ಗಾಂಜಾ ವಶ, ಎಲ್ಲಿ, ಹೇಗೆ ಸಿಕ್ತು ಮಾದಕ ವಸ್ತು?

ಎಂಜಿನಿಯರ್ ಆಗುವ ಕನಸು ಹೊತ್ತಿದ್ದ ಯುವಕ
ಚಿನ್ಮಯ್ ಅವರು ಓದು ಮತ್ತು ಸಂಗೀತದಲ್ಲಿ ಪರಿಣತಿ ಸಾಧಿಸಿದ್ದರು. ಜೊತೆಗೆ, ಎಂಜಿನಿಯರ್ ಆಗುವ ಕನಸು ಹೊಂದಿದ್ದರು. ಆದರೆ, ನೀಟ್ ಪರೀಕ್ಷೆಯಲ್ಲಿ ಉತ್ತಮ ಅಮಕ ಗಳಿಸಲು ಸಾಧ್ಯವೇ ಎಂಬ ಅನುಮಾನದಿಂದ ಭಯಪಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.suddikanaja.com/2020/11/14/short-circuit-in-mandli-feeder-kptcl/

error: Content is protected !!