ಮನೆಯಲ್ಲಿ ಯಾರೂ‌ ಇಲ್ಲದ ವೇಳೆ ನಡೀತು ಕಳ್ಳತನ, ಎಲ್ಲಿ ಗೊತ್ತಾ?

 

 

ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ಸಹೋದರಿಯ ಮನೆಗೆ ಹೋದ ವೇಳೆ ಮನೆಯ ಬೀಗ ಮುರಿದು ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ಕಳ್ಳತನ ಮಾಡಲಾಗಿದೆ.
ತಾಲೂಕಿನ ಹಾಡೋನಹಳ್ಳಿ ಗ್ರಾಮದ ಮಂಜುಳಾ ಅವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ.
ಏನೇನು ಕಳ್ಳತನ ಮಾಡಲಾಗಿದೆ?
ಮನೆಯಲ್ಲಿದ್ದ ಚಿನ್ನದ ಝಮುಕಿ, ಕಾಲು ಚೈನು, ಬೆಳ್ಳಿಯ ಗುಂಡು, ಅರಿಶಿಣ ಕುಂಕುಮದ ಬೆಳ್ಳಿ ಬಟ್ಟಲು, ಐದು ಸಾವಿರ ರೂಪಾಯಿ ನಗದು ಕಳ್ಳತನ ಮಾಡಲಾಗಿದೆ. ಅಂದಾಜು 50 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವುದಾಗಿ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತಿದ್ದಾರೆ.

error: Content is protected !!