ಶಿವಮೊಗ್ಗದಿಂದ ಅಹಮದಾಬಾದ್, ದೆಹಲಿಗೆ ಸಾಗಿಸುತ್ತಿದ್ದ ₹7 ಕೋಟಿ ಮೌಲ್ಯದ ಅಡಿಕೆ ವಶ, ಹೇಗೆ ನಡೀತು ಕಾರ್ಯಾಚರಣೆ?

 

 

ಸುದ್ದಿ ಕಣಜ.ಕಾಂ | KARNATAKA | ARECANUT
ಶಿವಮೊಗ್ಗ: ಅಡಿಕೆಯ ಬೆಲೆ ಗಗನಮುಖಿಯಾಗಿ ಸಾಗುತ್ತಿರುವುದು ಒಂದೆಡೆಯಾದರೆ ಅದೇ ಅಡಿಕೆಯನ್ನು ಜಿ.ಎಸ್.ಟಿ‌ ಪಾವತಿಸದೇ ಸಾಗಿಸಲಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆಯೆಂದರೆ, ಹುಬ್ಬಳಿ-ನವಲಗುಂದ ರಸ್ತೆಯಲ್ಲಿ‌ ವಶಕ್ಕೆ ಪಡೆದಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಅಡಿಕೆ ಲಾರಿಗಳೇ ಸಾಕ್ಷಿ.
ಅಂದಾಜು ₹7 ಕೋಟಿ ಮೌಲ್ಯದ ಅಡಿಕೆ ಸಾಗಿಸುತಿದ್ದ ಏಳು ಲಾರಿಗಳನ್ನು ಕೇಂದ್ರ ಜಿ.ಎಸ್.ಟಿ. ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

Areca nut

ಶಿವಮೊಗ್ಗ to ಅಹಮದಾಬಾದ್, ದೆಹಲಿ

ಸರ್ಕಾರದ ಬೊಕ್ಕಸೆಕ್ಕೆ ನಷ್ಟ ಮಾಡಿ ಜಿ.ಎಸ್.ಟಿ. ಪಾವತಿ‌ ಮಾಡದೇ ಶಿವಮೊಗ್ಗ ಬಳಿ‌ ಖರೀದಿಸಿದ ಭಾರಿ ಪ್ರಮಾಣದ ಅಡಿಕೆಯನ್ನು ಅಹಮದಾಬಾದ್ ಹಾಗೂ ದೆಹಲಿ ಮಾರ್ಗಕ್ಕೆ ಸಾಗಿಸಲಾಗುತಿತ್ತು. ಇದರ ಬಗ್ಗೆ ಜಿ.ಎಸ್.ಟಿ. ಗುಪ್ತಚರ ನಿರ್ದೇಶನಾಲಯ ಮಂಗಳೂರು ವಲಯದ ಘಟಕದಿಂದ ಸಿಕ್ಕ ಖಚಿತ ಮಾಹಿತಿ ಮೇರೆಗೆ ಲಾರಿಗಳನ್ನು ತಡೆದು ಪರಿಶೀಲಿಸಿದ್ದು, ಲಾರಿಯಲ್ಲಿ ಏಳು ಕೋಟಿ ಮೌಲ್ಯದ ಅಡಿಕೆ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಏಳೂ ಲಾರಿಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆದಿದೆ.

error: Content is protected !!