ಸುದ್ದಿ ಕಣಜ.ಕಾಂ | DISTRICT | CYBER CRIME
ಶಿವಮೊಗ್ಗ: ಸಿಮೆಂಟ್ ಡೀಲರ್ ಶಿಪ್ ಕೊಡಿಸುವುದಾಗಿ ನಂಬಿಸಿ 2.70 ಲಕ್ಷ ರೂಪಾಯಿ ಮೋಸ ಮಾಡಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಶಿವಮೊಗ್ಗ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2020/11/09/man-cheats-saying-drdo-jobs-and-took-lakhs-of-amount/
ಭದ್ರಾವತಿ ತಾಲೂಕಿನ ಆನವೇರಿ ಗ್ರಾಮದ ವ್ಯಕ್ತಿಯೊಬ್ಬರು ಮೋಸ ಹೋಗಿದ್ದಾರೆ. ಹೊಸದಾಗಿ ಸಿಮೆಂಟ್ ಡೀಲರ್ ಶಿಪ್ ಪಡೆಯುವುದಕ್ಕಾಗಿ ಇಂಟರ್ ನೆಟ್ ನಲ್ಲಿ ಹುಡುಕಾಟ ನಡೆಸಲಾಗಿ ಪ್ರತಿಷ್ಠಿತ ಕಂಪನಿಯೊಂದರ ಹೆಸರಿನಲ್ಲಿದ್ದ `ಸಿಮೆಂಟ್ ಬಿಜಿನೆಸ್ ಡೀಲರ್ ಶಿಪ್’ ಹೆಸರಿನ ವೆಬ್ಸೈಟ್ ನಲ್ಲಿ ಲಭ್ಯವಿದ್ದ ಯು.ಆರ್.ಎಲ್.ನಲ್ಲಿ ಸೂಚಿಸಿದಂತೆ ಲಿಂಕ್ ವೊಂದರ ಮೇಲೆ ಕ್ಲಿಕ್ ಮಾಡಿದ್ದಾರೆ. ಆಗ ಅಪರಿಚಿತ ಸಂಖ್ಯೆಯೊಂದರಿಂದ ಮೊಬೈಲ್ ವಾಟ್ಸಾಪ್ ಗೆ ಸಂದೇಶ ಬಂದಿದೆ.
ಸಿಮೆಂಟ್ ಡೀಲರ್ ಶಿಪ್ ಪಡೆಯುವುದಕ್ಕಾಗಿ ಮೊದಲು 2 ಲೋಡ್ ಸಿಮೆಂಟ್ ಅನ್ನು ಖರೀದಿ ಮಾಡಬೇಕಾಗುತ್ತದೆ ಎಂದು ಸೂಚನೆ ನೀಡಲಾಗಿದೆ. ಅದರಂತೆ, ನೆಫ್ಟ್ ಮೂಲಕ ಸೆಪ್ಟೆಂಬರ್ 1ರಂದು 1.62 ಲಕ್ಷ ರೂ., ಹಾಗೂ ಸೆ.2ರಂದು 1.08 ಲಕ್ಷ ರೂ. ಸೇರಿ ಒಟ್ಟು 2.70 ಲಕ್ಷ ರೂ. ಕಳುಹಿಸಿದ್ದಾರೆ. ನಂತರ, ಮೂರು ದಿನಗಳಾದರೂ ಲಾರಿ ಬಂದಿರಲಿಲ್ಲ. ಚಾಲಕನೆಂದು ನೀಡಲಾಗಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಪ್ರತಿಕ್ರಿಯೆ ಸಿಕ್ಕಿಲ್ಲ. ಆದ್ದರಿಂದ, ಅಧಿಕೃತ ಸಿಮೆಂಟ್ ಕಂಪನಿಗೆ ವಿಚಾರಿಸಲಾಗಿದೆ. ಆಗ ಮೋಸ ಹೋಗಿರುವುದು ತಿಳಿದುಬಂದಿದೆ.
ಹಣ ಹಾಕಿಸಿಕೊಂಡು ಡೀಲರ್ ಶಿಪ್ ನೀಡದೇ ಮೋಸ ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ದೂರು ನೀಡಲಾಗಿದೆ.
https://www.suddikanaja.com/2021/04/24/fraud-agency-cheated-a-man/