ಐದು ಲಕ್ಷ ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಪೊಲೀಸ್ ಠಾಣೆಗೆ ತಲುಪಿಸಿದ ಆಟೋ ಚಾಲಕನ ಪ್ರಾಮಾಣಿಕತೆಗೊಂದು ಸೆಲ್ಯೂಟ್

 

 

ಸುದ್ದಿ ಕಣಜ.ಕಾಂ | CITY | SOCIAL WORK
ಶಿವಮೊಗ್ಗ: ಪ್ರಯಾಣಿಕರೊಬ್ಬರು ಮರೆತು ಆಟೋದಲ್ಲೇ ಬಿಟ್ಟು ಹೋಗಿದ್ದ 5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸ್ ಠಾಣೆಗೆ ತಲುಪಿಸುವ ಮೂಲಕ ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

https://www.suddikanaja.com/2020/11/20/bihar-man-found-in-sagar/

ಜೈಲು ವೃತ್ತದಿಂದ ಗುಂಡಪ್ಪ ಶೆಡ್ ವರೆಗೆ ಆಟೋದಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯೊಬ್ಬರು ಕೆಲವು ವಸ್ತುಗಳನ್ನು ಆಟೋದಲ್ಲೇ ಮರೆತು ಹೋಗಿದ್ದರು. ಈ ವಿಚಾರ ಗಮನಕ್ಕೆ ಬಂದಿದ್ದೇ ಆಟೋ ಚಾಲಕ ಮಜೀದ್ ಅವರು ಅವುಗಳನ್ನು ಕೋಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ವಾರಸುದಾರರ ಕೈಸೇರಿದ ವಸ್ತುಗಳು
ಆಟೋ ಚಾಲಕ ಮಜೀದ್ ಅವರು ತಂದು ಕೊಟ್ಟಿದ್ದ ಸಾಮಗ್ರಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಅದನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ಸಾಮಗ್ರಿಗಳು ಹೊಯ್ಸಳ ಕೋ ಆಪರೇಟಿವ್ ಸೊಸೈಟಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸೋಗಾನೆ ಮೂಲದ ರಮೇಶ್ ಎಂಬುವವರಿಗೆ ಸೇರಿರುವ ಸಾಮಗ್ರಿಗಳನ್ನು ಅವರನ್ನು ಠಾಣೆಗೆ ಕರೆದು ಒಪ್ಪಿಸಲಾಗಿದೆ.
ಮಜೀದ್ ಅವರ ಪ್ರಾಮಾಣಿಕತೆಗೆ ಕೋಟೆ ಪೊಲೀಸರು, ಆಟೋ ಚಾಲಕರು ಹಾಗೂ ಮಾಲೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://www.suddikanaja.com/2021/07/29/private-ticket-25-percent-hike-will-decide-soon-said-by-dc-shivakumar/

error: Content is protected !!