ಗಣೇಶ ಪೆಂಡಾಲು ಹಿಂಭಾಗದ ಕಟ್ಟಡಕ್ಕೆ ಹಾನಿ, ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಹಿಂದೂ ಮಹಾಸಭಾ ಒತ್ತಾಯ

 

 

ಸುದ್ದಿ ಕಣಜ.ಕಾಂ | TALUK | GANESHOTSAVA 
ಹೊಸನಗರ: ಸಾರ್ವಜನಿಕ ಗಣೇಶೋತ್ಸವ ಜಾಗದ ಪಕ್ಕದಲ್ಲಿರುವ ಸರ್ಕಾರಿ ಕಟ್ಟಡವನ್ನು ಕಿಡಿಗೇಡಿಗಳು ಹಾನಿಗೊಳಿಸಿರುವುದಾಗಿ ಆರೋಪಿಸಿ ಅಖಿಲ ಭಾರತ ಹಿಂದೂ ಮಹಾಸಭಾ ಆರೋಪಿಸಿದೆ.

Hosanagara ganesha
ಹಿಂದೂ ಮಹಾಸಭಾದಿಂದ ಹೊಸನಗರ ತಹಸೀಲ್ದಾರಿಗೆ ಮನವಿ ಸಲ್ಲಿಸಲಾಯಿತು.

ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಮಹಾಸಭಾದ ಪದಾಧಿಕಾರಿಗಳು ಕಚ್ಚಿಗೆಬೈಲು ಗ್ರಾಮದ ಆರು ಜನ ಸೇರಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಪೆಂಡಾಲು ಹಿಂಭಾಗದ ಸರ್ಕಾರಿ ಕಟ್ಟಡ ಅತಿಕ್ರಮಿಸಿ ಗೋಡೆಯನ್ನು ಕೆಡವಲಾಗಿದೆ. ಯಾವುದೇ ಪೂರ್ವಾನುಮತಿ ಇಲ್ಲದೇ ಕೃತ್ಯ ಎಸಗಲಾಗಿದೆ. ತಹಸೀಲ್ದಾರರೇ ಒಡೆಯಲು ಅನುಮತಿ ನೀಡಿರುವುದಾಗಿ ಹೇಳಲಾಗಿದೆ. ಆದರೆ, ಈ ಬಗ್ಗೆ ತಹಸೀಲ್ದಾರ್ ಅವರಿಗೆ ಮಾಹಿತಿ ಕೇಳಿದಾಗ ಅವರು ಇಲ್ಲವೆಂದಿದ್ದಾರೆ. ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನಲಾದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

error: Content is protected !!