ಶಿವಮೊಗ್ಗದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದವನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ

 

 

ಸುದ್ದಿ ಕಣಜ.ಕಾಂ | DISTRICT | COURT NEWS
ಶಿವಮೊಗ್ಗ: ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳ‌ನೀಎಇ ಅತ್ಯಾಚಾರ ಎಸಗಿದ ವ್ಯಕ್ತಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹50 ಸಾವಿರ ದಂಡವನ್ನು ವಿಧಿಸಿ ನ್ಯಾಯಾಲಯವು ಮಂಗಳವಾರ ಆದೇಶ ಹೊರಡಿಸಿದೆ.

https://www.suddikanaja.com/2021/01/12/video-call-facility-in-shivamogga-central-jail/

ಟಿಪ್ಪುನಗರ ನಿವಾಸಿ ಬರ್ಕತ್ ಅಲಿಯಾಸ್ ಮೊಹಮ್ಮದ್ ಗೌಸ್ ಪೀರ್ ಎಂಬಾತನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶಿಸಿದೆ. ಈತ 2021ರ ಮೇ 11ರಂದು 9 ವರ್ಷದ ಬಾಲಕಿಯ‌ ಮೇಲೆ ಅತ್ಯಾಚಾರ ಎಸಗಿ ಬೆದರಿಕೆ ಕೂಡ‌ ಒಡ್ಡಿದ್ದ. ಈ ಸಂಬಂಧ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು.
ನೊಂದ‌ ಬಾಲಕಿಗೆ ಪರಿಹಾರ
ಮಹಿಳಾ ಠಾಣೆ ಪಿಐ ಬಿ.ಕೆ. ಲತಾ ಅವರು ತನಿಖೆ ಕೈಗೊಂಡು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ಕಲಂ 376(2) (ಎನ್) (ಎಫ್) ಐಪಿಸಿ ಮತ್ತು ಕಲಂ 5(ಎನ್), 6 ಆಫ್ ಪೋಕ್ಸೋ 2012 ಕಾಯ್ದೆ ಅನ್ವಯ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಸತೀಶ್‍ ಅವರು ವಾದ ಮಂಡಿಸಿದ್ದು, ಶಿವಮೊಗ್ಗ ಎ.ಡಿ.ಜೆ ಎಫ್.ಟಿ.ಎಸ್.ಸಿ 1 (ಪೋಕ್ಸೋ) ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದೆ.
ಪ್ರಕರಣದ ಬಗ್ಗೆ ವಾದಗಳನ್ನು ಆಲಿಸಿದ ಬಳಿಕ‌ ನ್ಯಾಯಾಧೀಶ ದಯಾನಂದ್ ಅವರು ಆರೋಪಿಗೆ ಶಿಕ್ಷೆ‌ ವಿಧಿಸಿ ತೀರ್ಪು‌ ನೀಡಿದ್ದಾರೆ.
ಅಪರಾಧಿಯು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡವನ್ನು ವಿಧಿಸಿದ್ದು, ತಪ್ಪಿದ್ದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆಯನ್ನು ಮುಂದುವರೆಸಲು ತೀರ್ಪಿನಲ್ಲಿ‌ ತಿಳಿಸಲಾಗಿದೆ.
ನೊಂದ ಬಾಲಕಿಗೆ ಪರಿಹಾರವನ್ನಾಗಿ ದಂಡದ ಮೊತ್ತದಲ್ಲಿ ₹48 ಸಾವಿರ ಹಾಗೂ ಉಳಿದ ₹2000 ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿ ತೀರ್ಪು ನೀಡಲಾಗಿದೆ.

https://www.suddikanaja.com/2020/12/06/gang-rape-on-minor-girl-in-shivamogga/

error: Content is protected !!