ದೇವರ ಮನೆಯ ದೀಪದಿಂದ ಮನೆಗೆ ಬೆಂಕಿ, ಮನೆ ಸಾಮಗ್ರಿ ಸುಟ್ಟ ಭಸ್ಮ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ದೇವರ ಮನೆಯಲ್ಲಿದ್ದ ದೀಪ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದೆ.
ಶರಾವತಿ ನಗರದ ಬಿ.ಎಸ್.ಎನ್.ಎಲ್. ವಸತಿ ಗೃಹದಲ್ಲಿ ಉಪೇಂದ್ರ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದ್ದು, ಅಂದಾಜು 80 ಸಾವಿರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ದೇವರ ಮನೆಯಲ್ಲಿ ಹಚ್ಚಿದ್ದ ದೀಪ ಮಂಚದ ಮೇಲೆ ಬಿದ್ದು ಈ ಘಟನೆ ನಡೆದಿರಬಹುದು ಎನ್ನಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದು ಬೆಂಕಿ ಆರಿಸಿದ್ದಾರೆ.

error: Content is protected !!