ಭದ್ರಾ ಚಾನಲ್‍ನಲ್ಲಿ ಡೆಡ್ ಬಾಡಿ, ನಾಪತ್ತೆಯಾದ ಗಿರಿರಾಜ್ ಶವವೆಂದು ಧಾವಿಸಿದವರಿಗೆ ಶಾಕ್

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಕಳೆದ ಎರಡು ದಿನಗಳಿಂದ ತಲೆನೋವಾಗಿರುವ ಗಿರಿರಾಜ್ ನಾಪತ್ತೆ ಪ್ರಕರಣ ಅಧಿಕಾರಿಗಳಿಗೆ ಇನ್ನಿಲ್ಲದಂತೆ ಕಾಡುತ್ತಿದೆ.
ಎರಡು ದಿನ ನಿರಂತರ ಹುಡುಕಾಟದ ಬಳಿಕವೂ ಯಾವುದೇ ಸುಳಿವು ಸಿಗದ ಕಾರಣದಿಂದಾಗಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಟೆನ್ಶನ್ ನಲ್ಲಿರುವಾಗಲೇ ಗುರುವಾರ ಮತ್ತೊಂದು ಶಾಕ್ ತಗುಲಿದೆ.

sk followupಭದ್ರಾವತಿ ತಾಲೂಕಿನ ಕೂಡ್ಲಿಗೆರೆಯಲ್ಲಿರುವ ಫಾರೆಸ್ಟ್ ಗಾರ್ಡ್‍ವೊಬ್ಬರು ಕರೆ ಮಾಡಿ ಭದ್ರಾ ಚಾನಲ್ ನಲ್ಲಿ ಶವವೊಂದು ತೇಲಿ ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ, ಭದ್ರಾವತಿಯ ಕಂದಾಯ ಮೇಲ್ವಿಚಾರಕರು, ಗ್ರಾಮ ಲೆಕ್ಕಿಗರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಜತೆಗೆ, ಪೊಲೀಸರು ಭೇಟಿ ನೀಡಿದ್ದಾರೆ.

ಇನ್ನೇನು ಜಿಲ್ಲೆಯ ಅಧಿಕಾರಿಗಳು ಅಲ್ಲಿಗೆ ಹೋಗುವುದಕ್ಕೆ ಅಣಿಯಾಗುತ್ತಿದ್ದರು. ಅಷ್ಟರಲ್ಲಿಯೇ ಶವ ಮಹಿಳೆಯದೆಂದು ಮಾಹಿತಿ ನೀಡಲಾಗಿದೆ. ಆಗ ಶವವನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಮಹಿಳೆಯ ಶವದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಗಿರಕಿ ಹೊಡೆಯುತ್ತಲೇ ಇದೆ ಗಿರಿರಾಜ್ ಮಿಸ್ಸಿಂಗ್ ಕೇಸ್
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಎಫ್.ಡಿ.ಎ ಗಿರಿರಾಜ್ ನಾಪತ್ತೆ ಪ್ರಕರಣದ ತನಿಖೆ ನಡೆಯುತ್ತಲೇ ಇದೆ. ಆದರೆ, ಎರಡು ದಿನಗಳಿಂದ ಒಂದೇ ಸ್ಥಳದಲ್ಲಿ ತನಿಖೆ ಗಿರಕಿ ಹೊಡೆಯುತ್ತಿದೆ. ಮಾಹಿತಿಗಳನ್ನು ಕಲೆ ಹಾಕುವ ಕೆಲಸ ನಡೆಯುತ್ತಿದೆ.

https://www.suddikanaja.com/2021/09/29/giriraj-missing-case/

error: Content is protected !!