Land revenue act | ಭೂ ಕಂದಾಯ ಕಾಯ್ದೆ 94ಸಿ ಆದಾಯ ಗರಿಷ್ಠ ಮಿತಿ ಏರಿಕೆಗೆ ಆರಗ ಜ್ಞಾನೇಂದ್ರ ಮನವಿ, ಪತ್ರದಲ್ಲಿ ಕೋರಿದ್ದೇನು?

 

 

ಸುದ್ದಿ ಕಣಜ.ಕಾಂ | DISTRICT | POLITICS
ಬೆಂಗಳೂರು: ಕರ್ನಾಟಕ ಭೂ ಕಂದಾಯ ಕಾಯಿದೆ 94ಸಿ ಅಡಿಯಲ್ಲಿ ಸಾರ್ವಜನಿಕರು ಭೂ ಮಂಜೂರಾತಿ ಫಲಾನುಭವಿಗಳಾಗಿ ಅರ್ಹತೆ ಗಳಿಸಲು ಪ್ರಸ್ತುತ ಇರುವ ವಾರ್ಷಿಕ ಗರಿಷ್ಠ ಆದಾಯದ ಮಿತಿಯನ್ನು ಹೆಚ್ಚಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

Aaraga Jnanendra
ಆರಗ ಜ್ಞಾನೇಂದ್ರ, ಗೃಹ ಸಚಿವರು

ಪ್ರಸ್ತುತ ಆದಾಯ ಮಿತಿಯು ₹30,000 ಇದ್ದು ಅದನ್ನು‌ ವಾರ್ಷಿಕ ಗರಿಷ್ಠ ₹1.20 ಲಕ್ಷಕ್ಕ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮನವಿ ಮಾಡಿದ್ದಾರೆ.
ಗರಿಷ್ಠ ಆದಾಯದ ಮಿತಿಯನ್ನು ಹೆಚ್ಚಿಸಲು ಅನುಕೂಲವಾಗುವಂತೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964, 94ಸಿ ಗೆ ತಿದ್ದುಪಡಿ ತಂದು ಗರಿಷ್ಠ ಮಿತಿಯನ್ನು ₹1.20 ಲಕ್ಷಕ್ಕೆ ಪರಿಷ್ಕರಿಸಿ ಆದೇಶ
ಹೊರಡಿಸುವಂತೆ ಕೋರಿದ್ದಾರೆ.
ಬಿಪಿಎಲ್ ಆದಾಯ ಮಿತಿ ಬಗ್ಗೆಯೂ ಉಲ್ಲೇಖ
ಆಹಾರ ಇಲಾಖೆಯಲ್ಲಿ ಬಿ.ಪಿ.ಎಲ್ ಕಾರ್ಡ್
ಫಲಾನುಭವಿಗಳಾಗಲು ಪ್ರಸ್ತುತ ಇರುವ ಆದಾಯದ ಮಿತಿ ₹1.20 ಲಕ್ಷ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

https://www.suddikanaja.com/2021/08/07/home-minister-portfolio-to-aaraga-jnanedra/

error: Content is protected !!