ಭದ್ರಾವತಿಯಲ್ಲಿ ಬೀದಿ ನಾಯಿಗಳ ಮಾರಣ ಹೋಮ ಪ್ರಕರಣ, ಪಂಚಾಯಿತಿ‌ ಸದಸ್ಯರು ಸೇರಿ‌ 9 ಜನರ ಬಂಧನ

 

 

ಸುದ್ದಿ ಕಣಜ.ಕಾಂ | TALUK | CRIME
ಭದ್ರಾವತಿ: ಬೀದಿ ಬದಿ ನಾಯಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆನ್ನಲಾದ ಪ್ರಕರಣ ಸಂಬಂಧ 9 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಕಾರ್ಯದರ್ಶಿ, ಬಿಲ್ ಕಲೆಕ್ಟರ್, ಮೈಸೂರಿನ ನಾಲ್ವರು ಇದ್ದಾರೆ.

https://www.suddikanaja.com/2021/09/09/stray-dogs-were-killed-in-mpm-forest-at-bhadravathi/

ತಾಲೂಕಿನ ಹುಣಸೇಕಟ್ಟೆ ಗ್ರಾಮದ ಕಂಬದಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ. 42ರ ಎಂಪಿಎಂ ಅರಣ್ಯದಲ್ಲಿ ನಾಯಿಗಳನ್ನು ಸಮಾಧಿ ಮಾಡಿದ ಪ್ರಕರಣ ಠಾಣೆಯ ಮೆಟ್ಟಿಲು ಏರುತಿದ್ದಂತೆಯೇ ಮತ್ತಷ್ಟು‌ ಗಂಭೀರತೆ ಪಡೆದಿದೆ. ಪ್ರಕರಣದಲ್ಲಿ ಭಾಗಿ ಆದವರನ್ನು ಬಂಧಿಸಲಾಗಿದೆ.
ನಾಯಿಯ ಕಾಟ ತಪ್ಪಿಸಿಕೊಳ್ಳುವುದಕ್ಕಾಗಿ ಕೃತ್ಯ
ಬೀದಿ ನಾಯಿಗಳ‌ ಕಾಟದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅವುಗಳನ್ನು ಹಿಡಿದು ನಿಯಮ ಬಾಹಿರವಾಗಿ ಸಮಾಧಿ ಮಾಡಲಾಗಿದೆ. ಎನಿಮಲ್ ರೆಸ್ಕ್ಯೂ ಕ್ಲಬ್ ನಿಂದ ದೂರು ನೀಡಿದ್ದು, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಪಿಸಿಎ) ಕಾಯ್ದೆ 1960 ಅಡಿ ಪ್ರಕರ ದಾಖಲಾಗಿದೆ.
60 ನಾಯಿಗಳ ಶವ ಪತ್ತೆ
ಗುಂಡಿಯಲ್ಲಿ 60 ನಾಯಿಗಳ ಶವಗಳು ಪತ್ತೆಯಾಗಿವೆ. ಅವುಗಳ ಕಳೆಬರಗಳನ್ನು ಹೊರಗೆ ತೆಗೆಯಲಾಗಿದೆ. ಪಶುಪಾಲನಾ ಇಲಾಖೆಯ ಪಶು ವೈದ್ಯಾಧಿಕಾರಿಗಳು ಮೃತ ನಾಯಿಗಳ ಚರ್ಮ, ಮೂಳೆ, ಕೂದಲಿನ ಮಾದರಿಗಳನ್ನು ಸಂಗ್ರಹಿಸಿ ಎಫ್.ಎಸ್.ಎಲ್ (ಫಾರೆನ್ಸಿಕ್ ಸೈನ್ಸ್ ಲ್ಯಾಬರೋಟರಿ)ಗೆ ಕಳುಹಿಸಿ ಕೊಡಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಪ್ರಕರಣದ ಇನ್ನಷ್ಟು ನಿಚ್ಚಳವಾಗಲಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

https://www.suddikanaja.com/2021/05/27/no-street-light-un-scientific-waste-management/

error: Content is protected !!