ಸಮಾಜಮುಖಿ ವೈದ್ಯ ಡಾ.ಎಸ್.ಟಿ.ಅರವಿಂದ್ ಗೆ ಡಾ.ಎಸ್.ಎಸ್. ಜಯರಾಮ್ ಅವಾರ್ಡ್, ಯಾವಾಗ ನೀಡಲಾಗುತ್ತೆ ಪ್ರಶಸ್ತಿ?

 

 

ಸುದ್ದಿ ಕಣಜ.ಕಾಂ | KARNATAKA | AWARD
ಶಿವಮೊಗ್ಗ: ಸಮಾಜಮುಖಿ‌ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮನೋವೈದ್ಯ ಡಾ.ಎಸ್.ಟಿ. ಅರವಿಂದ್ ಅವರಿಗೆ 2020-21ನೇ ಸಾಲಿನ ಡಾ.ಎಸ್.ಎಸ್.ಜಯರಾಮ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಐಎಂಎ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ.ಪರಮೇಶ್ವರ್ ಶಿಗ್ಗಾಂವಿ ಹೇಳಿದರು.

IMG 20210915 214456

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಮನೋ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದೆ. ಸೆಪ್ಟೆಂಬರ್ 18 ಹಾಗೂ 19ರಂದು ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ಭಾರತೀಯ ಮನೋ ವೈದ್ಯಕೀಯ ಸಂಘದ ವಾರ್ಷಿಕ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.

READ | ನಾಳೆಯಿಂದ ಜೋಗಕ್ಕೆ ಬರಬೇಕಾದರೆ ಈ ಹೊಸ ನಿಯಮಗಳು ಅನ್ವಯ, ಈ ದಾಖಲೆ ಇದ್ದರಷ್ಟೇ ಜಲಪಾತ ದರ್ಶನ

ಸಮಾಜದಲ್ಲಿ ಅನುಕರಣೀಯ ಸೇವೆ
ಡಾ. ಅರವಿಂದ್ ಅವರು ಮನೋ ವೈದ್ಯರಾಗಿ ಸಮಾಜದ ಮಾನಸಿಕ ಆರೋಗ್ಯದಲ್ಲಿ ಆದರ್ಶ ಪ್ರಾಯವಾದ ಕೆಲಸ‌ ಮಾಡುತಿದ್ದಾರೆ. ತಮ್ಮ ಭಾಷಣ, ವಿಚಾರ ಸಂಕಿರಣಗಳು, ಪತ್ರಿಕಾ‌ಬರಹ, ಟಿವಿ ಹಾಗೂ ಆಕಾಶವಾಣಿಯಲ್ಲಿ ಸಂದರ್ಶನಗಳನ್ನು ನೀಡುವ‌ ಮೂಲಕ ಮಾನಸಿಕ ಆರೋಗ್ಯ ಕುರಿತು ಜಾಗೃತಿ ಮೂಡಿಸಿದ್ದಾರೆ. ಸೇವೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ‌. ಇವರು ಇನ್ನಷ್ಟು ಕಳಕಳಿಯಿಂದ ಕರ್ತವ್ಯ‌ನಿರ್ಹಣೆ ಮಾಡಿ ಇನ್ನಷ್ಟು ಪ್ರಶಸ್ತಿಗಳನ್ನು ಪಡೆಯಲಿದೆ ಎಂದು ಹಾರೈಸಿದರು.

READ | ಶಿವಮೊಗ್ಗದಿಂದ ಅಹಮದಾಬಾದ್, ದೆಹಲಿಗೆ ಸಾಗಿಸುತ್ತಿದ್ದ ₹7 ಕೋಟಿ ಮೌಲ್ಯದ ಅಡಿಕೆ ವಶ, ಹೇಗೆ ನಡೀತು ಕಾರ್ಯಾಚರಣೆ?

ಫಲಾಪೇಕ್ಷೆ ಇಲ್ಲದೇ ಶ್ರಮಿಸುತ್ತಿರುವ ಅರವಿಂದ್
ಖ್ಯಾತ ಮನೋವೈದ್ಯ ಡಾ.ಎ.ಶಿವರಾಮಕೃಷ್ಣ ಮಾತನಾಡಿ, ಡಾ.ಅರವಿಂದ್ ಅವರು ಯಾವುದೇ ಫಲಾಪೇಕ್ಷೆ ಇಲ್ಲದೇ ಕಾರ್ಯನಿರ್ವಹಿಸುತಿದ್ದಾರೆ. ಸಮಾಜದ ಆರೋಗ್ಯ ವೃದ್ಧಿಗೆ ಶ್ರಮಿಸುತಿದ್ದಾರೆ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಡಾ. ಎಸ್.ಟಿ.ಅರವಿಂದ್, ಪ್ರೊ. ಕಿರಣ್‌ ದೇಸಾಯಿ, ಡಾ. ಐಶ್ವರ್ಯ ಉಪಸ್ಥಿತರಿದ್ದರು.

https://www.suddikanaja.com/2021/07/31/important-meeting-in-bangalore-about-malenadu-network/

error: Content is protected !!