ಸುದ್ದಿ ಕಣಜ.ಕಾಂ | CITY | EDUCATION NEWS
ಶಿವಮೊಗ್ಗ: ನಗರದ ಡಿವಿಎಸ್ ಸಂಜೆ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಬಿಎ ಪದವಿ ಪ್ರವೇಶ ಆರಂಭವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು, ಸರ್ಕಾರಿ ಉದ್ಯೋಗಿಗಳು, ಗೃಹಿಣಿಯರು, ಶಿಕ್ಷಕರು, ಖಾಸಗಿ ಉದ್ಯೋಗಸ್ಥರು ವಿದ್ಯಾಭ್ಯಾಸ ಮುಂದುವರೆಸಲು ಇದೊಂದು ಸುವರ್ಣ ಅವಕಾಶವಿದೆ. ನ್ಯಾಕ್ ನಿಂದ ‘ಬಿ’ ಶ್ರೇಣಿ ಮಾನ್ಯತೆ ಪಡೆದಿರುವ ಕುವೆಂಪು ವಿಶ್ವವಿದ್ಯಾಲಯದ ಏಕೈಕ ಅನುದಾನಿತ ಸಂಜೆ ಕಾಲೇಜು ಇದಾಗಿದೆ.
ಪಿಯುಸಿ, ಜೆಒಸಿ, ಐಟಿಐ, ಡಿಪ್ಲೊಮಾ ಅಥವಾ ಪ್ಯಾರಾ ಮೆಡಿಕಲ್ ಕೋರ್ಸ್ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದೆ. ಉಚಿತ ಕಂಪ್ಯೂಟರ್ ತರಬೇತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಾಗಾರ ನಡೆಸಲಾಗುವುದು. ವಿವರಗಳಿಗೆ ಪ್ರಾಂಶುಪಾಲ ಡಾ.ಎ.ಟಿ. ಪದ್ಮೇಗೌಡ 9141633477 ಸಂಪರ್ಕಿಸುವಂತೆ ತಿಳಿಸಲಾಗಿದೆ.