ಸಾಗರೋಪಾದಿಯಲ್ಲಿ ಹರಿದುಬಂದ ರೈತರು, ಬೆಳಗ್ಗೆಯಿಂದ ಏನೇನಾಯ್ತು?

 

 

ಸುದ್ದಿ ಕಣಜ.ಕಾಂ | DISTRICT |  FARMER PROTEST
ಶಿವಮೊಗ್ಗ: ಸಂಯುಕ್ತ ಕಿಸಾನ್ ಮೋರ್ಚಾ ಕರೆಯ ಮೇರೆಗೆ ಹಮ್ಮಿಕೊಂಡಿದ ಭಾರತ್ ಬಂದ್ ಗೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಿವಮೊಗ್ಗದಲ್ಲಿ ಹೇಗಿತ್ತು `ಭಾರತ್ ಬಂದ್’, ವಿಡಿಯೋ ರಿಪೋರ್ಟ್

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ವಿವಿಧ ಪ್ರಗತಿಪರ ಸಂಘಟನೆಗಳು ಶಿವಮೊಗ್ಗದ ನಾನಾ ಕಡೆಗಳಲ್ಲಿ ರ್ಯಾಲಿ, ಪ್ರತಿಭಟನೆ, ಕಾಲ್ನಡಿಗೆ, ಬೈಕ್ ಮೂಲಕ ಬಂದು ಪ್ರತಿಭಟನೆ ಮಾಡಿದರು.

ಬೈಕ್ ಜಾಥಾ ನಡೆಸುವ ಮೂಲಕ ನಾಗರಿಕರಲ್ಲಿ ಬಂದ್ ಬಗ್ಗೆ ಜಾಗೃತಿ ಮೂಡಿಸಿ, ನಗರದ ರಾಮಣ್ಣಶ್ರೇಷ್ಠಿ ಪಾರ್ಕ್ ಗಣಪತಿ ದೇವಸ್ಥಾನದ ಹತ್ತಿರ ಒಂದುಗೂಡಿ ಬೃಹತ್ ಮೆರವಣಿಗೆ ಹೊರಟು ಗಾಂಧಿ ಬಜಾರ್, ಬಿ.ಎಚ್.ರಸ್ತೆ, ನೆಹರೂ ರಸ್ತೆ ಪ್ರಮುಖ ಬೀದಿಗಳ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಹತ್ತಿರ ಸಭೆ ನಡಸುವ ಮೂಲಕ ಶಿವಮೊಗ್ಗದಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿ ನೆಡೆಸಲಾಯಿತು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಪ್ರಮುಖರಾದ ಕೆ.ಟಿ.ಗಂಗಾಧರ್, ಕೆ.ಎಲ್.ಅಶೋಕ್, ಕೆ.ಪಿ. ಶ್ರೀಪಾಲ್, ಎನ್. ರಮೇಶ್, ಎಸ್. ಶಿವಮೂರ್ತಿ, ಝೀಫಾನ್, ಆಫ್ತಾಪ್ ಪರ್ವೀಜ್, ಟಿ.ಎಚ್. ಹಾಲೇಶಪ್ಪ, ಶಾಂತವೀರ್ ನಾಯ್ಕ್ ಇತರರು ಭಾಗವಹಿಸಿದ್ದರು.

error: Content is protected !!