ನಂಜನಗೂಡಿನಲ್ಲಿ ದೇವಸ್ಥಾನ ಬೀಳಿಸಿ ಈಗ ಬಿಜೆಪಿಯವರು ಡ್ರಾಮಾ ಮಾಡುತಿದ್ದಾರೆ: ಎಚ್.ಡಿ.ಕುಮಾರಸ್ವಾಮಿ

 

 

ಸುದ್ದಿ ಕಣಜ.ಕಾಂ | TALUK | POLITICS
ಭದ್ರಾವತಿ: ನಂಜನಗೂಡಿನಲ್ಲಿ‌ ದೇವಸ್ಥಾನ ತೆರವುಗೊಳಿಸಿ ಈಗ ಬಿಜೆಪಿಯವರು ವಿಧೇಯಕ ಜಾರಿಯ ಡ್ರಾಮಾ ಮಾಡುತಿದ್ದಾರೆ ಎಂದು ಮಾಜಿ‌ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ತಾಲೂಕಿನ ಗೋಣಿಬೀಡು ಗ್ರಾಮಕ್ಕೆ‌ ಮಂಗಳವಾರ ಆಗಮಿಸಿದಾಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದುತ್ವದ ಹೆಸರಿನಲ್ಲಿ‌ ಅಧಿಕಾರಕ್ಕೆ ಬಂದಿರುವ ಬಿಜೆಪಿಯವರು ಈಗ ಹಿಂದೂ ದೇವಸ್ಥಾನ ತೆರವಿಗೆ ಕೈಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

READ | ಭದ್ರಾವತಿ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಇದು ರಾಜ್ಯದಲ್ಲೇ ಮೊದಲು

ತಪ್ಪು ಮುಚ್ಚಿಕೊಳ್ಳಲು ಡ್ರಾಮಾ
ಬಿಜೆಪಿ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ವಿಧೇಯಕ ಜಾರಿಗೆ ತರಲು ಹೊರಟಿದೆ. ಬಿಜೆಪಿಯವರು ಒಂದೆಡೆ ಹಿಂದುತ್ವದ ಹೆಸರು ಹೇಳುತ್ತಾರೆ. ಮತ್ತೊಂದೆಡೆ ಅವರದ್ದೇ ಸರ್ಕಾರದಲ್ಲಿ ದೇವಸ್ಥಾನವನ್ನು ಒಡೆಯುತ್ತಾರೆ. ವಿಧೇಯಕ ತರಲು ಹೊರಟಿರುವ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು. ವಿಧೇಯಕದ ಮೂಲಕ ಮತ್ತೊಂದು ಡ್ರಾಮಾ ಪ್ರಾರಂಭಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ವಿಧೇಯಕ ಜಾರಿಗೆ ತರಲು ಹೊರಟಿದೆ. ದೇವಸ್ಥಾನ ಒಡೆದ ಬಳಿಕ ಸರ್ಕಾರ ಇದೀಗ ವಿಧೇಯಕ ಜಾರಿಗೆ ತರಲು ಹೊರಟಿದೆ. ಮುಂಚೆಯೇ ಎಚ್ಚೆತ್ತುಕೊಂಡಿದ್ದರೆ ಅವರ ನಿಜವಾದ ಹಿಂದುತ್ವದ ರಕ್ಷಣೆ ಮಾಡುತ್ತಿದ್ದಾರೆ ಎನ್ನಬಹುದಿತ್ತು ಎಂದು ತಿಳಿಸಿದರು.

https://www.suddikanaja.com/2021/03/12/bjp-furious-reaction-about-bhadravathi-case/

error: Content is protected !!