ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ದೊಡ್ಡಪೇಟೆ, ಕೋಟೆ, ತುಂಗಾನಗರ, ಶಿವಮೊಗ್ಗ ಗ್ರಾಮಾಂತರ, ಜಯನಗರ ಮತ್ತು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ ಒಟ್ಟು 82 ಚಟುವಟಿಕೆಯುಳ್ಳ ರೌಡಿಗಳ ಪರೇಡ್ ನಡೆಸಲಾಯಿತು.
ನಗರದ ಡಿಎಆರ್ (DAR) ಪೊಲೀಸ್ ಮೈದಾನದಲ್ಲಿ ಬುಧವಾರ ಸಂಜೆ ನಡೆದ ರೌಡಿ ಪರೇಡ್(Rowdy parade)ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ (GK Mithun kumar) ರೌಡಿಗಳಿಗೆ ತರಾಟೆ ತೆಗೆದುಕೊಂಡರು.
READ | ಶಿವಮೊಗ್ಗದಲ್ಲಿ ಹೊಸದಾಗಿ ಆಟೋ ದರ ಫಿಕ್ಸ್, ಯಾವಾಗಿಂದ ಜಾರಿ? ಏನೆಲ್ಲ ಷರತ್ತುಗಳು ಅನ್ವಯ?
ರೌಡಿ ಪರೇಡ್’ಗೇನು ಕಾರಣ?
ಕಾನೂನು ಸುವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತು ರೌಡಿ ಆಸಾಮಿಗಳ ಮೇಲೆ ಹೆಚ್ಚಿನ ನಿಗಾವಹಿಸುವ ಹಿನ್ನೆಲೆಯಲ್ಲಿ ಪರೇಡ್ ನಡೆಸಲಾಯಿತು. ಇದರಲ್ಲಿ ರೌಡಿಗಳ ಆದಾಯದ ಮೂಲ ಮತ್ತು ಜೀವನೋಪಾಯಕ್ಕಾಗಿ ಮಾಡುತ್ತಿರುವ ಕೆಲಸಗಳ ಬಗ್ಗೆ ವಿಚಾರಣೆ ನಡೆಸಲಾಯಿತು.
ವಾರದಲ್ಲಿ ಎರಡು ದಿನ ಸ್ಟೇಷನ್ ಭೇಟಿ ಕಡ್ಡಾಯ
ವಾರದಲ್ಲಿ ಎರಡು ದಿನಗಳು ಕಡ್ಡಾಯವಾಗಿ ಠಾಣೆಗೆ ಹಾಜರಾಗಿ ಹಾಜರಾತಿ ನೀಡುವಂತೆ ಸೂಚನೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಯಾವುದಾದರೂ ಅಪಾರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆಯೂ ಸಹ ಪರಿಶೀಲನೆ ನಡೆಸಲಾಯಿತು. ಇನ್ನು ಮುಂದೆ ಯಾವುದೇ ಕಾನೂನು ಬಾಹಿರ ಚಟುವಟಿಕೆ ಮತ್ತು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು.
https://suddikanaja.com/2022/11/14/tough-rules-on-auto-drivers-at-shimoga/