ಕಲ್ಯಾಣ ಕರ್ನಾಟಕ ಸೇರಿ ರಾಜ್ಯದ ವಿವಿಧೆಡೆ 3,006 ಹುದ್ದೆಗಳ ಭರ್ತಿ, ಅಭ್ಯರ್ಥಿಗಳಿಗೆ ಬಂಪರ್ ಅವಕಾಶ, ಅರ್ಜಿ ಸಲ್ಲಿಕೆ ಇತ್ಯಾದಿ ಮಾಹಿತಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ | KARNATKA | JOB JUNCTION
ಬೆಂಗಳೂರು: ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 3,006 ಸಮುದಾಯ ಆರೋಗ್ಯ ಅಧಿಕಾರಿ (ಸಿಎಚ್.ಸಿ) ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ನರ್ಸಿಂಗ್/ ಪೋಸ್ಟ್​ ಬಿಎಸ್ಸಿ ನಸಿರ್ಂಗ್ ವಿದ್ಯಾರ್ಹತೆ ಹೊಂದಿರುವವರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅಭ್ಯರ್ಥಿಗಳು ನಸಿರ್ಂಗ್ ಕೌನ್ಸಿಲ್ ಕೆಎನ್.ಸಿ/ ಐಎನ್.ಸಿಯಲ್ಲಿ ನೋಂದಾಯಿಸಿರಬೇಕು. ಹೆಚ್ಚಿನ ಆದ್ಯತೆಯುಳ್ಳ ಜಿಲ್ಲೆ (ಬೀದರ್, ಕಲಬುರಗಿ, ಬಳ್ಳಾರಿ, ರಾಯಚೂರು, ಚಿಕ್ಕಮಗಳೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಯಾದಗಿರಿ)ಗಳಲ್ಲಿ ಮಾಸಿಕ 24,200 ರೂಪಾಯಿ ಸಂಭಾವನೆ ಪಾವತಿಸಲಾಗುವುದು.

ಆದ್ಯತೆ ಹೊರತುಪಡಿಸಿದ (ಹಾವೇರಿ, ಕೋಲಾರ, ಬೆಳಗಾವಿ, ತುಮಕೂರು, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಮಂಡ್ಯ, ಚಿಕ್ಕಬಳ್ಳಾಪುರ, ಕೊಡಗು, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ನಗರ ಮತ್ತು ಧಾರವಾಡ) ಜಿಲ್ಲೆಗಳಲ್ಲಿ 22,000 ರೂಪಾಯಿ ಸಂಭಾವನೆ ಪಾವತಿಸಲಾಗುವುದು. ಕಾರ್ಯಕ್ಷಮತೆ ಅನ್ವಯ ಪ್ರೋತ್ಸಾಹ ಧನ 8000 ರೂಪಾಯಿ ನೀಡಲಾಗುವುದು. ಅಭ್ಯರ್ಥಿಗಳ ಆಯ್ಕೆಯು ಆನ್‍ಲೈನ್ ಪರೀಕ್ಷೆ ಮೂಲಕ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಅಭ್ಯರ್ಥಿಯು ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ವಾಸವಿರಬೇಕು. ಕನ್ನಡವನ್ನು ಒಂದು ಭಾಷೆಯಾಗಿ ಎಸ್ಸೆಸ್ಸೆಲ್ಸಿ ತರಗತಿ ಅಭ್ಯಾಸಿಸಿರಬೇಕು.

ಯಾರಿಗೆಷ್ಟು ವಯೋಮಿತಿ?

ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷದೊಳಗೆ, ಎಸ್‍ಸಿ, ಎಸ್ಟಿ, ಪ್ರವರ್ಗ 1, ಮಾಜಿ ಸೈನಿಕರಿಗೆ 40 ವರ್ಷ, 2ಎ, 2ಬಿ, 3ಎ, 3ಬಿ ಹಾಗೂ ಇತರೆ ಹಿಂದುಳಿದ ವರ್ಗಕ್ಕೆ 38 ವರ್ಷ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಯ ಆರಂಭ | ಸೆಪ್ಟೆಂಬರ್ 27, 2021
ಹಣ ಪಾವತಿಗಾಗಿ ಆನ್ಲೈನ್ ಗೇಟ್ವೇ ಆರಂಭ | ಸೆಪ್ಟೆಂಬರ್ 29, 2021
ಅರ್ಜಿ ಸಲ್ಲಿಕೆಗೆ ಅಂತಿಮ ದಿನ | 18 ಅಕ್ಟೋಬರ್ 2021 ಸಂಜೆ 5 ಗಂಟೆ
ಲಿಖಿತ ಪರೀಕ್ಷ ಮತ್ತು ಫಲಿತಾಂಶ ಪ್ರಕಟಣೆ ದಿನಾಂಕ | ಅಕ್ಟೋಬರ್ 23, 2021
ಮೂಲ ದಾಖಲೆಗಳ ಪರಿಶೀಲನೆ ಆರಂಭ | ಅಕ್ಟೋಬರ್ 26, 2021

https://www.suddikanaja.com/wp-content/uploads/2021/09/Notification-NHM-Karnataka-CHO-Posts.pdf

NOTIFICATION

WEBSITE

https://www.suddikanaja.com/2021/09/27/job-opportunity-to-all-in-ssc/

error: Content is protected !!