JOBS IN SHIVAMOGGA | ಎಸ್ಸೆಸ್ಸೆಲ್ಸಿ, ಕಾಮರ್ಸ್ ಪಾಸ್ ಆದವರಿಗೆ ಉದ್ಯೋಗ ಅವಕಾಶ, ಪೂರ್ಣ ಮಾಹಿತಿಗಾಗಿ ಕ್ಲಿಕ್ಕಿಸಿ

 

 

ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಪಾಸಾದ ಹಾಗೂ ವಾಣಿಜ್ಯ ವಿಷಯದಲ್ಲಿ ಪದವಿ ಹೊಂದಿರುವವರಿಗೆ ಉದ್ಯೋಗ ಅವಕಾಶವಿದೆ.
ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿಯಲ್ಲಿ ಖಾಲಿ ಇರುವ ಲೆಕ್ಕಿಗರು ಮತ್ತು ಜವಾನರ ತಲಾ 1 ಹುದ್ದೆಗೆ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೇಮಕಾತಿ ಒಂದು ವರ್ಷದ ಕರಾರಿನ ಆಧಾರದ ಮೇಲಿರಲಿದೆ. ಆಯ್ಕೆಯಾಗುವ ನೌಕರರಿಗೆ ಗೌರವ ಧನ ಪಾವತಿಸಲಾಗುವುದು.
ಯಾವುದಕ್ಕೆಷ್ಟು ಗೌರವ ಧನ, ಏನು ವಿದ್ಯಾರ್ಹತೆ
ಲೆಕ್ಕಿಗರ ಹುದ್ದೆಗೆ ಬಿಕಾಂ ವಿಷಯದಲ್ಲಿ ಪದವಿ ಪಾಸಾಗಿರಬೇಕು. ಲೆಕ್ಕ ನಿರ್ವಹಣೆಯಲ್ಲಿ ಕನಿಷ್ಠ ಐದು ವರ್ಷಗಳ ಅನುಭವ ಇರಬೇಕು. ಕನ್ನಡ, ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಹೊಂದಿರಬೇಕು(ಬರೆಯಲು, ಓದಲು), ಕಂಪ್ಯೂಟರ್ ಜ್ಞಾನದಲ್ಲಿ‌ ಎಂಎಸ್ ಆಫಿಸ್ ಬಗ್ಗೆ ಗೊತ್ತಿರಬೇಕು. ಇಂಡರ್ನೆಟ್ ಆಪರೇಷನ್ ಬಗ್ಗೆ ತಿಳಿದಿರಬೇಕು. ಟ್ಯಾಲಿ ತಂತ್ರಾಂಶ ಬಗ್ಗೆ ಜ್ಞಾನ ಇರಬೇಕು. ಈ ಎಲ್ಲ ಅರ್ಹತೆ ಇರುವವರು ಅರ್ಜಿಗಳನ್ನು ಸಲ್ಲಿಸಬಹುದು. ಆಯ್ಕೆಯಾದರೆ ಮಾಸಿಕ ₹13,310 ಗೌರವ ಧನ ನೀಡಲಾಗುವುದು.

READ | ಗೃಹ ಸಚಿವ ಆರಗ ಜ್ಞಾನೇಂದ್ರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಮಾದರಿ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ

ಅದೇ ರೀತಿ, ಕಚೇರಿ ಜವಾನರು ಹುದ್ದೆಗೆ ಅರ್ಜಿ ಸಲ್ಲಿಸಲು ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. ಕಚೇರಿಯಲ್ಲಿ‌ ಶುಚಿತ್ವ ಕಾಪಾಡುವ ಬಗ್ಗೆ ಕೆಲಸದ ಅನುಭವ ಇರಬೇಕು. ಓದಲು, ಬರೆಯಲು ಗೊತ್ತಿರಬೇಕು. ಈ ಹುದ್ದೆಗೆ ನೇಮಕಗೊಂಡ ವ್ಯಕ್ತಿ ಕಚೇರಿ ವ್ಯವಹಾರಕ್ಕಾಗಿ ಬ್ಯಾಂಕ್ ಗೆ ಓಡಾಡಬೇಕಾಗುತ್ತದೆ. ಹೀಗಾಗಿ, ಸರ್ಕಾರಿ‌ ಕೆಲಸದಿಂದ ವಜಾ ಆಗಿರಬಾರದು. ಮೇಲ್ಕಂಡ ಅರ್ಹತೆ ಇದ್ದವರು ಅರ್ಜಿ‌ ಸಲ್ಲಿಸಬಹುದು. ಆಯ್ಕೆಯಾದರೆ ₹10,648 ಗೌರವ ಧನ ನೀಡಲಾಗುವುದು.
ಅರ್ಜಿಗಳನ್ನು ಇಲ್ಲಿಗೆ ತಲುಪಿಸಿ
ಅರ್ಜಿಯನ್ನು ಬಿಳಿ ಹಾಳೆಯಲ್ಲಿ, ಸ್ವವಿವರಗಳನ್ನು ನಮೂದಿಸಿದ ಬಯೋಡಾಟ, ಅಂಕಪಟ್ಟಿ, ಅನುಭವ ಪ್ರಮಾಣ ಪತ್ರದೊಂದಿಗೆ ಜಿಲ್ಲಾಧಿಕಾರಿಗಳು ಮತ್ತು ಅಧ್ಯಕ್ಷರು ಜಿಲ್ಲಾ ಬಾಲಕಾರ್ಮಿಕರ ಯೋಜನಾ ಸೊಸೈಟಿ ಶಿವಮೊಗ್ಗ ಜಿಲ್ಲೆ ಇವರ ಹೆಸರಿಗೆ ಬರೆದು ಕಾರ್ಮಿಕ ಅಧಿಕಾರಿ, ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಕಾರ್ಮಿಕ ಅಧಿಕಾರಿಗಳ ಕಚೇರಿ, 2ನೇ ಮಹಡಿ ವಾಣಿಜ್ಯ ಸಂಕೀರ್ಣ, ಸೂಡಾ ಕಾಂಪ್ಲೆಕ್ಸ್ ವಿನೋಬನಗರ ಇಲ್ಲಿಗೆ ಸೆಪ್ಟೆಂಬರ್ 27ರೊಳಗೆ ತಲುಪಿಸಬೇಕು ಎಂದು ತಿಳಿಸಲಾಗಿದೆ.

https://www.suddikanaja.com/2021/09/17/jobs-in-rdpr-on-degree-and-engineering/

error: Content is protected !!